ಮುಂದಿನ ವರ್ಷ ಕೋರ್ಟ್‌ಗಳಲ್ಲಿ ಡಬಲ್ ಶಿಫ್ಟ್
ನವದೆಹಲಿ
: ಮುಂಬರುವ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಎಲ್ಲಾ
ನ್ಯಾಯಾಲಯಗಳಲ್ಲೂ ಎರಡು ಪಾಳಿಗಳು ಜಾರಿಯಾಗಲಿದೆ.
ಹೀಗೊಂದು
ಮಹತ್ತರ ನಿರ್ಣಯವನ್ನು ಪ್ರಕಟವಾಗಿದ್ದು ಮಂಗಳವಾರ ನಡೆದ ಸ್ವಾತಂತ್ರ್ಯ
ದಿನಾಚರಣೆ ಧ್ವಜಾರೋಹಣ ಸಮಯದಲ್ಲಿ. ಧ್ವಜಾರೋಹಣ ಮಾಡಿ ಮಾತನಾಡಿದ
ಮುಖ್ಯ ನ್ಯಾಯಮೂರ್ತಿ ವೈ. ಕೆ. ಸಭರ್‌ವಾಲ್ ಹೀಗೊಂದು ವಿಶಿಷ್ಟ
ಕೊಡುಗೆ ನೀಡಿದ್ದಾರೆ.
ಮುಂದಿನ
ಸ್ವಾತಂತ್ರ್ಯೋತ್ಸವಕ್ಕೆ ಈ ಪದ್ಧತಿ ಜಾರಿಗೆ ಬರಲಿದ್ದು, ದೀಪಾವಳಿ
ವೇಳೆಗೆ ಈ ಎರಡು ಪಾಳಿಯ ಯೋಜನೆ ಪ್ರತಿ ಜಿಲ್ಲೆಯ ಒಂದು ನ್ಯಾಯಾಲಯದಲ್ಲಿ
ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.
ಮ್ಯಾಜಿಸ್ಟ್ರೇಟ್
ಮಟ್ಟದಲ್ಲಿಯೂ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ಹೈಕೋರ್ಟ್ ಅಥವಾ ಸುಪ್ರೀಂ
ಕೋರ್ಟ್‌ಗೆ ಇದು ಅನ್ವಯಿಸುವುದಿಲ್ಲ.