ಏಡ್ಸ್ ಜಾಗೃತಿ ಸಮ್ಮೇಳನದಲ್ಲಿ ಭಾರತಕ್ಕೆ
ಕೆಟ್ಟಸುದ್ದಿ
ಟೊರೆಂಟೋ: ಭಾರತದ ಕೆಲವು ಪ್ರದೇಶಗಳಿಗೆ ಸೀಮಿತವಾಗಿದ್ದ
ಏಡ್ಸ್ ಸೋಂಕು ಈಗ ಹಳ್ಳಿಗಳ ಕಡೆಯೂ ಹರಡುತ್ತಿರುವುದಾಗಿ
ಟೊರೆಂಟೋದಲ್ಲಿ ನಡೆದ ವಿಶ್ವ ಏಡ್ಸ್ ಜಾಗೃತಿ ಸಮ್ಮೇಳನದಲ್ಲಿ ಬಹಿರಂಗಗೊಂಡಿದೆ.
ಹಿಂದೆ
ಹೆಚ್‌ಐವಿ ಹಾಗೂ ಏಡ್ಸ್ ಕೇವಲ ಮಾದಕ ವ್ಯಸನಿಗಳು ಹಾಗೂ ವೇಶ್ಯಾವಾಟಿಕೆ
ಮಾಡುವವರಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು. ಆದರೆ ಈಗ ಸಾಮಾನ್ಯ
ನಾಗರೀಕರಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದ ಹೆಂಗಸರಲ್ಲಿ ಹೆಚ್ಚಾಗಿ
ಏಡ್ಸ್ ಸೋಂಕು ಪತ್ತೆಯಾಗಿರುವುದು ಚಿಂತೆಗೀಡುಮಾಡಿದೆ ಎಂದು
ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ನುಡಿದಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಶೇ. ೩೯
ಮಹಿಳೆಯರು ಹಾಗೂ ಶೇ. ೫೭ ಏಡ್ಸ್ ಪ್ರಕರಣಗಳು ಗ್ರಾಮೀಣ ಪ್ರದೇಶದಲ್ಲಿ
ಕಂಡುಬಂದಿದೆ.