ಗಣಿಲಂಚ : ಅನಂತ ಮೂರ್ತಿ ಹೊಸ ಪ್ರತಿಜ್ಞೆ
ಕಳಂಕ ಕಳೆಯುವವರೆಗೆ ರಾಜಕಾರಣಿಗಳೊಂದಿಗೆ ವೇದಿಕೆಯಲ್ಲಿ
ಕೂರಲ್ಲ
ಬೆಂಗಳೂರು : ಗಣಿ ಲಂಚ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆದು
ಸರಕಾರವು ಭ್ರಷ್ಟಾಚಾರದ ಕಳಂಕದಿಂದ ಹೊರಬರುವವರೆಗೆ, ಮುಖ್ಯಮಂತ್ರಿ
ಮತ್ತು ಸಚಿವರು ಭಾಗವಹಿಸುವ ಯಾವುದೇ ಕಾರ್‍ಯಕ್ರಮದಲ್ಲಿ
ತಾವು ಭಾಗವಹಿಸುವುದಿಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ
ಡಾ. ಯು. ಆರ್. ಅನಂತ ಮೂರ್ತಿ ಪ್ರತಿಜ್ಞೆ ಮಾಡಿದ್ದಾರೆ.
ಅವರು ಮಂಗಳವಾರ ಸರ್ವೋದಯ ಪಕ್ಷ , ಗಣಿಲಂಚ ಪ್ರಕರಣದ
ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ರಾಜೀನಾಮೆಯನ್ನು
ಆಗ್ರಹಿಸಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಪ್ರತಿಭಟನೆಯಲ್ಲಿ
ಸಾಹಿತಿ ದೇವನೂರು ಮಹಾದೇವ, ರಾಜ್ಯ ರೈತ ಸಂಘದ ಮುಖಂಡರು
ಮತ್ತು ದಲಿತಸಂಘರ್ಷ ಸಮಿತಿ ಮುಖಂಡರು ಮತ್ತು ಕರುನಾಡ ಸೇನೆಯ
ಮುಖ್ಯಸ್ಥರು ಭಾಗವಹಿಸಿದ್ದರು.