|
`ಆನ್‌ಲೈನ್ ಲಾಟರಿ ನಿಷೇಧಕ್ಕೆ ಬಿಜೆಪಿ ಬದ್ಧ
ಶಿವಮೊಗ್ಗ : ಆನ್‌ಲೈನ್ ಲಾಟರಿ ತಡೆಗೆ ಹೈಕೋರ್ಟ್ ತಡೆಯಾಜ್ಞೆ
ನೀಡಿದ್ದರೂ ಕೂಡ, ಇದನ್ನು ನಿಷೇಧಿಸಲು ರಾಜ್ಯ ಸರಕಾರ ಎಲ್ಲ
ರೀತಿಯ ಪ್ರಯತ್ನ ನಡೆಸಲಿದೆ ಎಂದು ಉಪಮುಖ್ಯಮಂತ್ರಿ ಬಿ. ಎಸ್.
ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ
ವಿರೋಧ ಪಕ್ಷದಲ್ಲಿದ್ದಾಗ ಆನ್‌ಲೈನ್ ಲಾಟರಿ ನಿಷೇಧ ಮಾಡುವಂತೆ ಸಾಕಷ್ಟು
ಹೋರಾಟ ನಡೆಸಿತ್ತು. ಈಗಲೂ ಬಿಜೆಪಿ ತನ್ನ ನಿಲುವಿಗೆ ಬದ್ಧವಾಗಿದೆ. ಆದರೆ
ಲಾಟರಿಯವರು ಹೈಕೋರ್ಟ್‌ನಿಂದ ನಿಷೇಧಕ್ಕೇ ತಡೆಯಾಜ್ಞೆ
ತರಿಸಿದ್ದಾರೆ.
ಆನ್‌ಲೈನ್
ಲಾಟರಿಯಿಂದಾಗಿ ಸಮಾಜದ ಮೇಲಾಗುವ ಹಾನಿಯನ್ನು ಹೈಕೋರ್ಟ್‌ಗೆ ಮನವರಿಕೆ
ಮಾಡಿಕೊಟ್ಟು ಇದನ್ನು ನಿಷೇಧಿಸುವ ಪ್ರಯತ್ನ ಮಾಡಲಾಗುವುದು
ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
|