ಮತ್ತೊಮ್ಮೆ
ಎಲ್‌ಪಿಜಿ ಬೆಲೆ ಏರಿಕೆ ಸಂಭವ
ಪ್ರಧಾನಿ ಭಾಷಣದಲ್ಲಿ ಸೂಚ್ಯ ಪ್ರಸ್ತಾಪ
ನವದೆಹಲಿ
: ವಿರ್ಶವ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿರುವ ಹಿನ್ನೆಲೆಯಲ್ಲಿ
ಸೀಮೆಎಣ್ಣೆ, ಎಲ್‌ಪಿಜಿ ಗ್ಯಾಸ್ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ.
ಮಂಗಳವಾರ ಸ್ವಾತಂತ್ರ್ಯೋತ್ಸವ ಭಾಷಣ ಮಾಡುತ್ತಿದ್ದ ಪ್ರಧಾನಿ
ಮನಮೋಹನ್ ಸಿಂಗ್ ತೈಲ ಬೆಲೆ ಏರಿಕೆಯ ಬಗ್ಗೆ ಸೂಚ್ಯವಾಗಿ
ಪ್ರಸ್ತಾಪಿಸಿದರು. ಪೆಟ್ರೋಲಿಯಂ ಉತ್ಪನ್ನಗಳ ಸಬ್ಸಿಡಿ ಹೊರೆಯನ್ನು
ಕೇಂದ್ರ ಸರಕಾರ ತುಂಬಾ ಕಾಲ ಭರಿಸುವುದು ಕಷ್ಟ ಸಾಧ್ಯ ಎಂದಿರುವ
ಪ್ರಧಾನಿ ತೈಲ ಉತ್ಪನ್ನಗಳ ಬೆಲೆಏರಿಸುವ ಅನಿವಾರ್‍ಯತೆಯನ್ನು
ಉಲ್ಲೇಖಿಸಿದರು.