Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Friday, 01 September 2006 03:31 PM

ಶ್ರೀ ಕೃಷ್ಣ ಸ್ಮರಣೆ

  • ಪ್ರತಿಭಾ ನಂದಕುಮಾರ್

  •            -೧-

    ಬೇಳಿ ಹುಳಿ ವಾಸನೆಯ ಹುಡುಗಿಯರ

    ಮನ ಕೆಡಿಸಿ ಮರ್ತ್ಸ್ಯಗಂಧಿಯರ ಮಾಡಬಯಸಿದ

    ಬೆವರ ವಾಸನೆಯ ಹುಡುಗ

    ಕೊನೆಗೆ ಮಣ್ಣಲ್ಲಿ ಒಂದಾಗಿ

    ನಿನ್ನ ಗೋರಿಯ ಮೇಲೆ ಸಸಿ ಹುಟ್ಟಿ

    ಅವರ ತುರುಬಿಗೆ ಹೂವಾದವು.

    ಹೂವ ಸುಗಂಧವೇ ಬೇರೆ.

     

                 -೨-

    ವರ್ಣಗಳಲ್ಲಿ ಭೇದ ಕಂಡು ಕನಲಿದ ಹುಡುಗ

    ಎಲ್ಲ ಬಣ್ಣಗಳ ಕಲಸಿ ಒಂದು ಮಾಡುವೆನೆಂದ

    ಕಪ್ಪು ಕತ್ತಲೆ ಸೀಳಿ ಬೆಳಕು ಮೂಡುವ ಮೊದಲು

    ಕಾಡಿನ ಹಾದಿ ತಿಳಿಯದೆ ಬಳಲಿದ

    ಕಂದು ಬಣ್ಣದ ಕುದುರೆ ಏರಿ ಮಾಯವಾದ.

    ಖುರ ಪುಟದ ಪ್ರತಿಧ್ವನಿ ಮಾತ್ರ ಸ್ಪಷ್ಟ.

     

             -೩-

    ಹೊತ್ತು ಮುಳುಗಿದ ಮೇಲೆ

    ಕಾಡಿನ ಗೀಜಗನ ಗೂಡಲ್ಲಿ

    ಕೊಳಲುಲಿತ

    ಕಶ್ಮರೆಯಾದ ಕೃಷ್ಣನ ಶೇಷ

     

             -೪-

    ಭಾಗವತರಿಗೆ ಪ್ರೀತಿ ಬಾಲಕೃಷ್ಣನ ಲೀಲೆ

    ಗೋಕುಲದ ಹುಡುಗಿಯರ ಕಣ್ಣು ಸುಂದರಾಂಗನ ಮೇಲೆ

    ಆಸಕ್ತರಿಗೆ ಗೀತೋಪದೇಶ ಮಾಲೆ

    ಸಾವು ಕರೆದಾಗ ಬಿಟ್ಟು ಹೊರಟವನ ಕಂಡು

    ಎಲ್ಲರೆದೆಯಲ್ಲಿ ಮರುಕದ ಜಲಧಾರೆ.

     

    Print This PagePrint this page

     

    Email this Page

    ಮುಖಪುಟ

    Copyright Vikranta Prakashana 2006. All rights reserved.
    Site best viewed in 800x600 resolution.

    Email : feedback@vikrantakarnataka.com