ಕೋಲಾಗೆ ಬ್ಯಾನ್, ಹೆಲ್ಮೆಟ್ ಸೆ.೧ ರಿಂದ
ಕಡ್ಡಾಯ
ಬೆಂಗಳೂರು: ರಾಜ್ಯ ಸರ್ಕಾರ ಎರಡು ಪ್ರಮುಖ ನಿರ್ಣಯಗಳನ್ನು
ತೆಗೆದುಕೊಂಡಿದೆ. ಒಂದು ಹೆಲ್ಮೆಟ್ ಕಡ್ಡಾಯಗೊಳಿಸುವುದು ಇನ್ನೊಂದು
ಸಾರ್ವಜನಿಕ ಸ್ಥಳದಲ್ಲಿ ತಂಪು ಪಾನೀಯದ ಮಾರಾಟ ಹಾಗೂ ವಿತರಣೆಯನ್ನು
ನಿಷೇಧಿಸುವುದು.
ಸೆಪ್ಟೆಂಬರ್ ೧ ರಿಂದ ಹೆಲ್ಮೆಟ್ ಕಡ್ಡಾಯವೆಂದು ಸರ್ಕಾರವು
ಹೇಳಿದೆಯಾದರೂ ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೆ ಕಡ್ಡಾಯ
ಎಂಬ ವಿಷಯದ ಬಗ್ಗೆ ಸುದ್ದಿಯಿಲ್ಲ.
ಆರೋಗ್ಯ ಹಾಗೂ ಕುಟುಂಬ ಯೋಜನೆ ಇಲಾಖೆ ಆದೇಶದಂತೆ ತಂಪು ಪಾನೀಯಗಳ
ಮಾರಾಟವನ್ನು ಶಾಲಾ ಕಾಲೇಜಿನ ಆವರಣ ೧೦೦ ಮೀ ವ್ಯಾಪ್ತಿಯಲ್ಲಿ ನಿಷೇಧಿಸಿದೆ.
ತಂಪು ಪಾನೀಯಗಳಲ್ಲಿ ವಿಷಕಾರಿ ವಸ್ತುಗಳು ಪತ್ತೆಯಾದ ಹಿನ್ನೆಲೆ
ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಈ ನಿರ್ಣಯವನ್ನು
ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.