Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Friday, 01 September 2006 03:31 PM

ಪ್ರಾರ್ಥನಾ ಶಾಲೆಯ ಸ್ವಾತಂತ್ರ್ಯ ಸಂಭ್ರಮ

ಆಗಸದಿ ಕವಿದಿದ್ದ ಮೋಡ ಸೂರ್ಯನೊಡನೆ ಕದ್ದು ಮುಚ್ಚಿ ಆಟವಾಡುತ್ತಿತ್ತು. ಪ್ರತಿ ವರುಷದಂತೆ ಈ ವರುಷವೂ ಪ್ರಭಾತ್ ಫೇರಿಯಲ್ಲಿ ಕರ್ನಾಟಕ ಹಾಗೂ ಭಾರತದ ದೃಶ್ಯ ವೈಭವನ್ನು ನಗರದ ಪದ್ಮನಾಭನಗರದಲ್ಲಿರುವ ಪ್ರಾರ್ಥನಾ ಶಾಲೆಯಿಂದ ಸಮಾರಂಭದ ನಡೆಯುವ ಮೈದಾನವರೆಗೂ ಮೆರೆಸಿದವು.

  • ಮಲೆನಾಡಿಗ

ಬೆಳಗ್ಗೆ ೧೦:೩೦ ರ ವೇಳೆಗೆ ಸ್ತಬ್ಧ ಚಿತ್ರಗಳ ಮೆರವಣಿಗೆ ಮೈದಾನವನ್ನು ತಲುಪಿತ್ತು. ಹಾಡು ಬಾ ಕೋಗಿಲೆ -ಬಿ.ಆರ್. ಛಾಯ ತಂಡ, ಹಂಪಿಯ ದೃಶ್ಯಾವಳಿಯುಳ್ಳ ರಾಯರ ರಾಯ ಕೃಷ್ಣದೇವರಾಯ, ನಾಡುನುಡಿಯ ಸಂಸ್ಕೃತಿಯ ಪ್ರತೀಕವಾಗಿ ಒಂದು, ನಾಡಿನ ಯೋಧರನ್ನು ಸ್ಮರಿಸುವ ಚಿತ್ರಣವೂ ಸೇರಿತ್ತು.

 

ಭಾಷಣದ ತುಣುಕುಗಳು:

ಬರ್ಥ್ ಡೇ ಬಾಯ್ ನಾಗತಿಹಳ್ಳಿ ಚಂದ್ರಶೇಖರ್

ಪ್ಯಾಕೇಜ್ ಡೀಲ್ ಎಂಬಂತೆ ಪ್ರತಿ ವರ್ಷವೂ ನಿಸಾರ್ ಅಹಮದ್ ಹಾಗೂ ನನ್ನನ್ನು ಸಮಾರಂಭಕ್ಕೆ ಕರೆಯುತ್ತಿರುವ ರವಿಗೆ ಧನ್ಯವಾದಗಳು.

 

ಪ್ರಾರ್ಥನಾ ಶಾಲೆಯ ಅಭಿವೃದ್ಧಿ ನೋಡಿದರೆ ರವಿ ಪೇಪರ್ ಕೆಲ್ಸ ನಿಲ್ಸಿ, ಎಲ್ಲಾ ಜಿಲ್ಲೆಗಳಲ್ಲೂ ಒಂದೊಂದು ಪ್ರಾರ್ಥನಾ ಶಾಲೆ ಪ್ರಾರಂಭಿಸಿದರೆ ಒಳಿತು.

 

`ನಾನು ಅಗಸ್ಟ್ ೧೫ ಹುಟ್ಟಿದ್ದು ಆಕಸ್ಮಿಕ, ಮದುವೆಯಾದದ್ದು ಅನುಕೂಲಕ್ಕೆ ಇದರಲ್ಲಿ ಯಾವ ರೀತಿ ಗಿಮಿಕ್ ಇಲ್ಲಾ' ಅಂದರು.

 

ಎಷ್ಟೋ ದೇಶದ ಸ್ವಾತಂತ್ರ್ಯ ದಿನಾಚರಣೆ ನೋಡಿದ್ದೇನೆ. ಹೆಚ್ಚು ಕಡೆ ಭಾಷಣಗಳೇ ಇರೋದಿಲ್ಲ, ನಮ್ಮ ದೇಶದ ಸಂಭ್ರಮವೇ ಬೇರೆ.

ಮೊದಲ ಬಾರಿಗೆ ನಾನು ನಿರ್ದೇಶನ ಮಾಡಿದ್ದು ಬೆಳೆಗೆರೆ ಕೃಷ್ಣಶಾಸ್ತ್ರಿ ರಚಿಸಿದ `ಹಳ್ಳಿ ಚಿತ್ರ' ನಾಟಕ ನನ್ನ ಸುಕೃತವೆಂದರು.

 

ನಿತ್ಯೋತ್ಸವದ ಕವಿ-ನಿಸಾರ್ ಅಹಮದ್

ಸಮ್ಮೇಳನಾಧ್ಯಕ್ಷನಾಗಿ ಆಯ್ಕೆಯಾದ ಮೇಲೆ ಮೊದಲ ಸನ್ಮಾನ ರವಿ ಬೆಳೆಗೆರೆಯಿಂದ ಆಗುತ್ತಿರುವುದು ಸಂತಸ ತಂದಿದೆ. ರವಿ ಬೆಳೆಗೆರೆಯ ಸರಳತೆ, ಬರವಣಿಗೆಯ ಮೋಡಿಗೆ ಮಾರು ಹೋಗಿದ್ದೇನೆ.

 ಕ್ವಾಲಿಟಿ ಇದ್ದರೆ ಎಲ್ಲರೂ ಮೆಚ್ಚುತ್ತಾರೆ ಎಂದರು.

 

೯೦ ವರುಷದ ತರುಣ-ಬೆಳೆಗೆರೆ ಕೃಷ್ಣಶಾಸ್ತ್ರಿ

ಅಹಿಂಸೆ, ಸತ್ಯ, ಸರ್ವಧರ್ಮ, ಬ್ರಹ್ಮಚರ್ಯ, ಸ್ವದೇಶಿ ಹೀಗೆ ಮಹಾತ್ಮ ಗಾಂಧಿ ಆಚರಿಸುತ್ತಿದ್ದ ೧೧ ವ್ರತಗಳ ಬಗ್ಗೆ ಹೇಳಿದರು.

 

ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ನಮ್ಮ ಅಭಿಪ್ರಾಯದ ಬಗ್ಗೆ ಗೌರವವಿರಬೇಕು, ವಿವೇಚನೆಯಿಂದ ವರ್ತಿಸಬೇಕು ಎಂದು ತಿಳಿಹೇಳಿದರು. `ಪ್ರತಿಯೊಬ್ಬರು ಮೈ ಬಗ್ಗಿಸಿ ದುಡಿದು ತಿನ್ನಬೇಕು' ಎಂಬ ವಿಶ್ವೇಶ್ವರಯ್ಯನವರ ಮಾತನ್ನು ನೆನಪಿಸಿದರು.

 

ಗಾಂಧೀಜಿಗೆ ಒಮ್ಮೆ ಕುಡಿದ ಅಮಲಿನಲ್ಲಿ ಓರ್ವ ಚಪ್ಪಲಿ ಹಾರ ಹಾಕಲು ಹೋದಾಗ ಗಾಂಧೀಜಿ ತಮ್ಮ ಚಪ್ಪಲಿಯನ್ನೂ ತೆಗೆದು ಅವನಿಗೆ ಕೊಟ್ಟು `ಚಿಕ್ಕ ಹಾರ ಏಕೆ ದೊಡ್ಡದನ್ನೇ ಹಾಕು ಎಲ್ಲರಿಗೂ ಕಾಣುತ್ತದೆ' ಎಂದರಂತೆ. ಹೀಗೆ ಗಾಂಧೀಜಿ ಇದ್ದರು ಎಂದು ಹೇಳಿ ಮಾತು ಮುಗಿಸಿದರು. ಧೀರ್ಘಕಾಲ ಮಾತನಾಡಿದರೂ ಸ್ವಲ್ಪವೂ ಬಳಲದಂತೆ ಕಾಣುತ್ತಿದ್ದರು.

 

ಆಷ್ಟರಲ್ಲಿ ಮುಖ್ಯಮಂತ್ರಿಗಳ ಆಗಮನ ........

ಮತ್ತೆ ಮೈಕ್ ಹಿಡಿದ ರವಿ ಬೆಳೆಗೆರೆ ಸಿಎಂ `ಸಾಹೇಬ್ರೆ ನೀವು ನಮ್ಮ ಏರಿಯಾದವರೇ.. ಸ್ವಲ್ಪ ದಯೆ ತೋರಿ ನಮ್ಮ ಶಾಲೆಗೆ ಒಂದು ಮೈದಾನ ಕೊಡಿಸಿ  ನೀವು ಕೊಟ್ಟ ಹಾಗೆ ಇಟ್ಟುಕೊಳ್ಳುತ್ತೇವೆ, ಬೇಲಿ ಮಾತ್ರ ಹಾಕುತ್ತೇವೆ, ಹೆಣ ಹೂಣುವುದಿಲ್ಲ, ಬಿಲ್ಡಿಂಗ್ ಕಟ್ಟೋದಿಲ್ಲ' ಎಂದು ಮನವಿ ಮಾಡಿದರು.

 

ಅಮೇರಿಕಾದ ಅಕ್ಕಗೆ ಕಳುಹಿಸುವೆ ಡೊಳ್ಳು ಹೊಡೆದ ಹುಡುಗಿರನ್ನಾ.............

 

ಪ್ರಾರ್ಥನಾ ಶಾಲೆಯ ಹೈಸ್ಕೂಲ್ ವಿದ್ಯಾರ್ಥಿನಿಯ ತಂಡದಿಂದ ಡೊಳ್ಳು ಕುಣಿತ ಪ್ರದರ್ಶನ, ಮಧ್ಯೆ ಮಧ್ಯೆ ನಿಂತು ನಿಂತು ಸಾಗಿದ ಇವರ ನೃತ್ಯದ ಡೊಳ್ಳಿನ ನಾದದ ಮೋಡಿಗೆ ಸಿಲುಕಿದ ನಮ್ಮ ಸಿಎಂ ತಮ್ಮ ಭಾಷಣದಲ್ಲಿ ಘೋಷಿಸಿಯೇ ಬಿಟ್ಟರು, ಸಾಧ್ಯವಾದರೆ ಈ ಮಕ್ಕಳನ್ನು ನಮ್ಮೊಂದಿಗೆ ಅಮೇರಿಕಾದ ಅಕ್ಕ ನಡೆಸುವ ವಿಶ್ವ ಕನ್ನಡ ಮೇಳಕ್ಕೆ ಕರೆದೊಯ್ಯುತ್ತೇವೆ ಎಂದರು.

 

ನಿಸಾರ್ ಅಹಮದ್ ಅವರಿಗೆ ಸಾರ್ವಜನಿಕವಾಗಿ ಸನ್ಮಾನ ಮಾಡಲು ಅವಕಾಶ ಮಾಡಿಕೊಟ್ಟಿದಕ್ಕೆ

ರವಿಗೆ ವಿಶೇಷ ವಂದನೆಗಳು ಎಂದರು.

 

ಮೈದಾನವನ್ನು ನೀಡುವುದಾಗಿ ಭರವಸೆ ಕೊಡುವುದಿಲ್ಲ, ಶೀಘ್ರವಾಗಿ ಕಾರ್ಯಗತ ಮಾಡಲಾಗುವುದು ಎಂದರು.

 

ಬಡ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಅನೇಕ ಶಾಲಾ, ಕಾಲೇಜುಗಳನ್ನು ಪ್ರಾರಂಭಿಸುತ್ತಿದ್ದೇವೆ.

 

ಪ್ರಾರ್ಥನಾ ಶಾಲೆ ಗ್ರಾಮೀಣ ಕಲೆಗೆ ಪ್ರಾಧ್ಯಾನತೆ ನೀಡುತ್ತಿರುವುದು ಒಳ್ಳೆಯ ಸಂಗತಿ ಎಂದರು.

 

ಒನ್ಸ್ ಎಗೇನ್ ರವಿ ಬ್ಯಾಕ್ ವಿಥ್ ಮೈಕ್........

 

ಮೈಕ್ ಹಿಡಿದಿದ್ದೇ ತಡ ಶಾಲೆಯ ಎಲ್ಲಾ ೨೦೦ ಟೀಚರ್‌ಗಳನ್ನು ನಿಲ್ಲಲು ಹೇಳಿ, ೩೬೦೦ ಮಕ್ಕಳ ಪರವಾಗಿ ನಿಮಗೆ ಶುಭಾಶಯ ಎಂದು ಸಿಎಂ ಗೆ ಶುಭ ಹಾರೈಸಿದರು.

 

ಸಿಎಂ ನ ಜನತಾದರ್ಶನ ಕಾರ್ಯಕ್ರಮವನ್ನು ಹೊಗಳಿದ ರವಿ, ಭ್ರಷ್ಟರಾಗಬೇಡಿ, ಹೀಗೆ ಮುಂದುವರೆಯಲಿ ನಿಮ್ಮ ಕಾಯಕ ಎಂದು ನುಡಿದರು.

 

ಸಿಎಂ ಹೊರಡುವ ಮೊದಲು ಮತ್ತೊಮ್ಮೆ ಮೈದಾನಕ್ಕಾಗಿ ರವಿ ಮನವಿ ಮಾಡೊದನ್ನು ಮರೆಯಲಿಲ್ಲ. ಡೊಳ್ಳು ಕುಣಿತ ನೋಡಿ ಅಮೇರಿಕಾ ಆಸೆ ಹುಟ್ಟಿಸಿದ ಸಿಎಂ ಎಲ್ಲಾ ಪೋಗ್ರಾಂ ನೋಡಿದ್ದರೆ ಎಲ್ಲರನ್ನೂ ಕರೆಯುತ್ತಿದ್ದರು ಅನ್ನಿಸುತ್ತದೆ ಎಂದರು.

 

ಮಾಳವಿಕಾ ಮೇಡಂ ಮಾತಾಡಿದ್ರೂ....

ನಾನು ಇಲ್ಲಿಗೆ ಕಾಲಿಟ್ಟಾಗ ನನಗೆ ಆಶ್ಚರ್‍ಯವಾಯ್ತು, ಇಷ್ಟು ದೊಡ್ಡದಾಗಿ ಸಂಭ್ರಮವಾಗಿ ಸ್ವತಂತ್ರ ದಿನಾಚರಣೆ ಅಚರಿಸುತ್ತಾರೆ ಅಂದು ಕೊಂಡಿರಲಿಲ್ಲ.

 

ಇಲ್ಲಿನ ಮಕ್ಕಳ ಪಥ ಸಂಚಲನವನ್ನು ನೋಡಿದಾಗ ನನಗೆ ನನ್ನ ದೆಹಲಿಯಲ್ಲಿನ ಶಾಲಾ ದಿನಗಳು ನೆನಪಿಗೆ ಬಂದವು ಎಂದರು.

 

ನಾಗತಿಹಳ್ಳಿಯವರು ಏನೋ ಹೇಳಿದ ಪ್ಯಾಕೆಜ್ ಡೀಲ್‌ನಂತೆ ಪ್ರತಿವರುಷ ನಾನು ಖಾಯಂ ಆಗಿ ಪ್ರಾರ್ಥನಾ ಶಾಲೆಯ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಭಾಗವಹಿಸುತ್ತೇನೆ.

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com