ಪೆಪ್ಸಿಯ ನೂತನ ಸಿಇಓ ಭಾರತೀಯ ಸಂಜಾತೆ
ಇಂದ್ರಾನೂಯಿ
ನವದೆಹಲಿ:
ಪೆಪ್ಸಿ ಮತ್ತು ಅದರ ಉಪ ಉತ್ಪನ್ನಗಳು ಭಾರತದಿಂದ ಜಾಗ ಖಾಲಿ
ಮಾಡುತ್ತಿರುವ ಹೊತ್ತಿಗೆ, ಅಮೆರಿಕಾ ದೈತ್ಯ ಪಾನೀಯ ಸಂಸ್ಥೆ ಪೆಪ್ಸಿ
ತನ್ನ ಕಂಪೆನಿಯ ನೂತನ ಸಿಇಓ ಆಗಿ ಭಾರತೀಯ ಸಂಜಾತೆ ಇಂದ್ರಾನೂಯಿಯವರನ್ನು
ಆಯ್ಕೆ ಮಾಡಿದೆ. ಅಕ್ಟೋಬರ್ ಒಂದರಿಂದ ಇಂದ್ರಾನೂಯಿ ಪೆಪ್ಸಿಯ
ಜಾಗತಿಕ ವಹಿವಾಟನ್ನು ನಿಯಂತ್ರಿಸಲಿದ್ದಾರೆ.
ಈ
ಮೊದಲು ಪೆಪ್ಸಿ ಕಂಪೆನಿಯ ಅಧ್ಯಕ್ಷೆ ಹಾಗೂ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ
ಇವರು, ಕಂಪೆನಿಯ ಕಾರ್ಪೋರೆಟ್ ಕಾರ್ಯಕ್ರಮ, ಹಣಕಾಸು ವ್ಯವಹಾರ,
ಮಾರುಕಟ್ಟೆ ಇತ್ಯಾದಿಗಳನ್ನು ನಿಯಂತ್ರಿಸುತ್ತಿದ್ದರು. ಅದಕ್ಕೂ ಮುನ್ನ
ಕಂಪೆನಿಯ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ ಅನುಭವ
ಅವರಿಗಿದೆ.
ಸಿಇಓ ಆಗಿ ಅಧಿಕಾರವಹಿಸಿದ ಬಳಿಕ ಪೆಪ್ಸಿಯ ಭಾರತೀಯ ಮಾರುಕಟ್ಟೆಯನ್ನು
ಮತ್ತೆ ವಿಸ್ತರಿಸಬೇಕಾದ ಸವಾಲು ಅವರ ಮುಂದಿದೆ. ಯಾಕೆಂದರೆ, ಪೆಪ್ಸಿ-ಕೋಲಾ
ಕಂಪೆನಿ ತಯಾರಿಸುವ ಉತ್ಪನ್ನಗಳಲ್ಲಿ ಕ್ರಿಮಿನಾಶಕ ಅಂಶ
ಇರುವುದು ಖಚಿತವಾಗಿದ್ದು, ಭಾರತದ ಕೆಲವು ರಾಜ್ಯಗಳು ಈಗಾಗಲೇ
ಅದನ್ನು ನಿಷೇಧಿಸಿವೆ. ಕೆಲವು ರಾಜ್ಯಗಳು ನಿಷೇಧಿಸುವ ಬಗ್ಗೆ
ಚಿಂತಿಸುತ್ತಿವೆ. ಇಂಥ ಸಮಯದಲ್ಲಿ ಹೇಗಾದರೂ ಮಾಡಿ ಅದರ ವಹಿವಾಟನ್ನು
ಹೆಚ್ಚಿಸಲೇಬೇಕಾದ ಅನಿವಾರ್ಯತೆ ಅವರ ಹೆಗಲ ಮೇಲೆ ಬಿದ್ದಿದೆ.
ಭಾರತದ
ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡೇ ಪೆಪ್ಸಿ ಇಂದ್ರಾರನ್ನು
ಸಿಇಓ ಆಗಿ ನೇಮಿಸಿದೆ ಎಂದು ಕಾರ್ಪೋರೇಟ್ ವಲಯದಲ್ಲಿ ಅಭಿಪ್ರಾಯ ಪಡಲಾಗುತ್ತಿದೆ.
ಮದ್ರಾಸ್‌ನಲ್ಲಿ
ಹುಟ್ಟಿದ ಇಂದ್ರಾನೂಯಿ ವಿದ್ಯಾಭ್ಯಾಸ ಮಾಡಿದ್ದು ಭಾರತದಲ್ಲೇ. ಬಳಿಕ
ಅಮೆರಿಕಾದ ಯೂನಿವರ್ಸಿಟಿಯಲ್ಲಿ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಉನ್ನತ
ವ್ಯಾಸಂಗ ಮಾಡಿದ್ದರು. `ಪೋರ್ಬ್ಸ್