ಹೋರಾಟಗಾರರ ಹಣ ಗುಳುಂ ಮಾಡಿದ ಬಿಜೆಪಿ ನಾಯಕಿ
ಹುಬ್ಬಳ್ಳಿ: ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಹಣವನ್ನು
ದುರುಪಯೋಗ ಮಾಡಿದ ಆರೋಪದ ಮೇಲೆ ಸ್ಥಳೀಯ ಬಿಜೆಪಿ ನಾಯಕಿಯನ್ನು
ಬಂಧಿಸಲಾಗಿದೆ.
ಹುಬ್ಬಳ್ಳಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷೆ ಗಂಗಾಂಬಿಕಾ ಹವಳದ್ ಸುಮಾರು
೧೨ ಮಹಿಳೆಯರಿಗೆ ಸ್ವಾತಂತ್ರ್ಯ ಹೋರಾಟಗಾರರ ವಿಧವಾ ಪತ್ನಿಯರೆಂದು
ಸುಳ್ಳು ದಾಖಲೆಯನ್ನು ಸೃಷ್ಠಿಸಿ, ಪಿಂಚಣಿ ಹಣ ೭,೫೦೦ ರೂ ನಲ್ಲಿ
೬,೦೦೦ ರೂಪಾಯಿಯನ್ನು ತನ್ನ ಬೊಕ್ಕಸಕ್ಕೆ ಗಂಗಾಂಬಿಕಾ
ಸೇರಿಸುತ್ತಿದ್ದಳೆಂದು ತಿಳಿದುಬಂದಿದೆ.
ಇದೇ ರೀತಿ ಗದಗ ಹಾಗೂ ಹಾವೇರಿಯಲ್ಲೂ ಮೋಸ ಮಾಡಿರುವ ಹಿನ್ನೆಲೆಯಲ್ಲಿ
ಪೊಲೀಸರು ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.