Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Friday, 01 September 2006 03:31 PM

ಅಸ್ಸಾಂ: ಉಲ್ಫಾ ವಿರುದ್ಧ ಸೈನಿಕ ಕಾರ್‍ಯಾಚರಣೆ ಸ್ಥಗಿತ

ನವದೆಹಲಿ : ನಿಷೇಧಿತ ಉಲ್ಫಾ ಉಗ್ರರ ವಿರುದ್ಧ ನಡೆಯುತ್ತಿದ್ದ ಸಮರಕ್ಕೆ ಸೈನಿಕ ಕಾರ್‍ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

 

ಅಸ್ಸಾಂನಲ್ಲಿ ಕಳೆದ ಏಳು ದಿನಗಳಿಂದ ಹಲವಾರು ಬಾಂಬ್ ಸ್ಫೋಟಗೊಂಡಿದ್ದವು.  ಕನಿಷ್ಠ ಪಕ್ಷ ೧೨ ಮಂದಿ ಈ ಸ್ಫೋಟಗಳಿಗೆ ಬಲಿಯಾಗಿದ್ದಾರೆ.  ರಾಜ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್‍ಯಾಚರಣೆಯನ್ನು ನಿಲ್ಲಿಸಲಾಗಿದೆ.

 

ಸೈನಿಕ ಕಾರ್‍ಯಾಚರಣೆಯನ್ನು ನಿಲ್ಲಿಸುವ ಮೂಲಕ ಉಲ್ಫಾ ಉಗ್ರರ ಪ್ರಮುಖ ಬೇಡಿಕೆಯನ್ನು ನೆರವೇರಿಸಿದಂತಾಗಿದೆ. ಅಸ್ಸಾಂನಲ್ಲಿ ಉಗ್ರರ ದಾಳಿ ಹೆಚ್ಚುತ್ತಿರುವುದನ್ನು ಗಮನಿಸಿದ ಸರಕಾರ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವುದಕ್ಕೋಸ್ಕರ ಸೈನಿಕ ಕಾರ್‍ಯಾಚರಣೆಯನ್ನು

ನಿಲ್ಲಿಸಲಾಗಿದೆ ಎಂದು ಪ್ರಕಟಿಸಿದೆ.

 

 ಅಲ್ಲದೆ ಮುಂದಿನ ವಾರ ಉಲ್ಫಾ ಉಗ್ರರ ಜೊತೆಗೆ ಸರಕಾರ ಶಾಂತಿ ಮಾತುಕತೆಗಳನ್ನು ಆರಂಭಿಸಲಿದೆ. ಆದ್ದರಿಂದ ಬಾಂಬ್‌ದಾಳಿಯನ್ನು ನಿಲ್ಲಿಸುವಂತೆಯೂ ಸರಕಾರ ಉಗ್ರರ ಬಳಿ ಮನವಿ ಮಾಡಿಕೊಂಡಿದೆ.

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com