ಛಾಪಾ ಹಗರಣ: ತೆಲಗಿ ಸಂಭಾಷಣೆ ಸಿ.ಡಿ. ಬಹಿರಂಗ
ಮುಂಬಯಿ:
ಛಾಪಾ ಹಗರಣದ ಪ್ರಮುಖ ರೂವಾರಿ ಅಬ್ದುಲ್ ಕರೀಂ ತೆಲಗಿ ಕರ್ನಾಟಕ ಹಾಗೂ
ಮಹಾರಾಷ್ಟ್ರದ ಅನೇಕ ಪೋಲಿಸ್ ಅಧಿಕಾರಿಗಳಿಗೆ ಲಂಚ ಕೊಟ್ಟಿರುವುದು
ಬಹಿರಂಗಗೊಂಡಿದೆ ಎಂದು ಖಾಸಗಿ ಸುದ್ದಿ ಚಾನೆಲ್ ಸಿಎನ್‌ಎನ್- ಐಬಿಎನ್ ವರದಿ
ಮಾಡಿದೆ.
ಅಲ್ಲದೆ ಛಾಪಾ ಹಗರಣದ ತನಿಖೆ ನಡೆಸುತ್ತಿರುವ `ಸ್ಟ್ಯಾಂಪಿಟ್'
ಬಳಿಯಿರುವ ಸಂಭಾಷಣೆಯ ಸೀಡಿಗಳು ತನಗೆ ದೊರೆತಿವೆ ಎಂದು
ಹೇಳಿರುವ ಈ ಚಾನೆಲ್ ಭಾನುವಾರ ಈ ಸೀಡಿಯ ಕೆಲವು ಅಯ್ದ ಭಾಗವನ್ನು
ಪ್ರಸಾರ ಮಾಡಿದೆ.
ಮಾಜಿ
ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಸ್ಟ್ಯಾಂಪಿಟ್ ಮುಖ್ಯಸ್ಥ
ಶ್ರೀಕುಮಾರ್, ಮಾಜಿ ಸಚಿವ ರೋಷನ್ ಬೇಗ್, ಮಹಾರಾಷ್ಟ್ರ ಮುಖ್ಯಮಂತ್ರಿ
ವಿಲಾಸ್‌ರಾವ್ ದೇಶ್‌ಮುಖ್, ಮಾಜಿ ಉಪಮುಖ್ಯಮಂತ್ರಿ ಛಗನ್ ಭುಜಬಲ್
ಮುಂತಾದ ಗಣ್ಯವ್ಯಕ್ತಿಗಳು ಸೀಡಿ ಸಂಭಾಷಣೆಯಲ್ಲಿ ಬಂದು ಹೋಗಿದ್ದಾರೆ
ಎನ್ನಲಾಗಿದೆ.
ಇದಲ್ಲದೆ ಕೇಂದ್ರ ಮಟ್ಟದ ಕೆಲ ರಾಜಕಾರಣಿಗಳೂ ತೆಲಗಿ ಫಲಾನುಭವಿಗಳ
ಪಟ್ಟಿಯಲ್ಲಿದ್ದಾರೆ ಎನ್ನಲಾಗಿದ್ದು, ತೆಲಗಿಗೆ ಛಾಪಾ ಕಾಗದ ಮಾರಾಟದ ಪರವಾನಿಗೆ
ನೀಡಿದ್ದೇ ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸ್ ರಾವ್ ಎಂಬ ಅಂಶ
ಬೆಳಕಿಗೆ ಬಂದಿದೆ.