ಮೈಸೂರು
ಜಿಲ್ಲಾ ಉಸ್ತುವಾರಿ ಸಚಿವರು ಅಗಸ್ಟ್ ೧೫ ರ ಒಳಗೆ ನಾಗರಹೊಳೆಯ ಬುಡಕಟ್ಟು
ಜನಾಂಗದ ಸಮಸ್ಯೆಗೆ ಪರಿಹಾರವನ್ನು ನೀಡದಿದ್ದರೆ ದಸರಾ ದಿನದಂದು
ಧರಣಿ ನಡೆಸುವುದಾಗಿ ಗಿರಿಜನ ಸಂಸ್ಥೆಯ ಸಂಯೋಜಕ ಎಂ.ಬಿ. ಪ್ರಭು
ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರಿಗೆ
ಭಾನುವಾರ ಈ ವಿಷಯ ತಿಳಿಸಿದ ಪ್ರಭು ನೂರಾರು ಗಿರಿಜನರು ದಸರಾ
ವೇಳೆಯಲ್ಲಿ ಮಾವುತರಾಗಿ, ದಿನಗೂಲಿ ಕೆಲಸಗಾರರಾಗಿ
ದುಡಿಯುತ್ತಾರೆ. ಕೆಲವರನ್ನು ತಾತ್ಕಾಲಿಕವಾಗಿ ಮಾತ್ರ ಸೇವೆಗೆ
ಬಳಸಿಕೊಳ್ಳುತ್ತಿದ್ದಾರೆ ಯಾವುದೇ ರೀತಿಯ ಸೌಲಭ್ಯವನ್ನು ಅವರಿಗೆ
ನೀಡಿಲ್ಲ ಎಂದು ದೂರಿದ್ದಾರೆ.
ನಾಗಪುರ
ಗ್ರಾಮದಲ್ಲಿ ಜನರಿಗೆ ಪುನರ್ವಸತಿ ಕಲ್ಪಿಸುವುದಾಗಿ ಹೇಳಿದ ಸರ್ಕಾರ ಈ
ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಇಲ್ಲಿನ ಆಶ್ರಮದ ಶಾಲೆಗಳಿಗೆ
ಶಿಕ್ಷಕರಿಲ್ಲ, ಅಡುಗೆ ಮಾಡುವವರು, ವಾರ್ಡನ್‌ಗಳು ಈ ಸ್ಥಾನವನ್ನು
ಆಗಾಗ ತುಂಬುತ್ತಿದ್ದಾರೆ ಎಂದು ಪ್ರಭು ಸಮಸ್ಯೆಯ ಚಿತ್ರಣ ನೀಡಿದರು.
ದಸರಾ ಉತ್ಸವದ ಉದ್ಘಾಟನೆಗೆ ಸಾಹಿತಿಗಳು, ಕ್ರೀಡಾಳುಗಳನ್ನು
ಕರೆಯುವುದರ ಬದಲು ಹಿರಿಯ ಮಾವುತರನ್ನು ಕರೆದು
ಉದ್ಘಾಟಿಸಬೇಕೆಂದು ಅವರು ಸಲಹೆ ನೀಡಿದರು.