Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Friday, 01 September 2006 03:31 PM

ಮೈಸೂರು ಮಿನರಲ್‌ನಿಂದ ಅರಣ್ಯ ಒತ್ತುವರಿ?

ಕೆಬ್ಬೆಹಳ್ಳಿ ಅರಣ್ಯದಲ್ಲಿ ಅನುಮತಿಯಿಲ್ಲದೇ ಗಣಿಗಾರಿಕೆ

 

ಬೆಂಗಳೂರು: ಅಕ್ರಮ ಗಣಿಗಾರಿಕೆ ತನಿಖಾ ತಂಡದ ಹೇಳಿಕೆಯಂತೆ ಮೈಸೂರು ಮಿನರಲ್ ಲಿಮಿಟೆಡ್ ಸಂಸ್ಥೆ(ಎಂಎಂಎಲ್) ಕೆಬ್ಬೆಹಳ್ಳಿ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿದ್ದು, ನಿಡಗಲ್ ಹತ್ತಿರದ ಪ್ರದೇಶವನ್ನು ಅಕ್ರಮ ಗಣಗಾರಿಕೆಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದೆ. ಆದರೆ ಎಂಎಂಎಲ್ ಸಂಸ್ಥೆ ಈ ಆರೋಪವನ್ನು ನಿರಾಕರಿಸಿದೆ.

 

ಅರಣ್ಯಾಧಿಕಾರಿ ಡಾ.ಯು.ವಿ.ಸಿಂಗ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ನೀಡಿರುವ ವರದಿಯಲ್ಲಿ ಪ್ರಕಾರ ಎಂಎಂಎಲ್ ಸಂಸ್ಥೆಯು ಅಕ್ರಮ ವ್ಯವಹಾರದಲ್ಲಿ ನಿರತವಾಗಿರುವುದಕ್ಕೆ ದಾಖಲೆಗಳಿವೆ ಎಂದು ಉಲ್ಲೇಖಿಸಲಾಗಿದೆ.

 

ಕೆಬ್ಬೆಹಳ್ಳಿ ಹಾಗೂ ನಿಡಗಲ್ ಗ್ರಾಮದಲ್ಲಿ ಗಣಿಗಾರಿಕೆ ಮಾಡಲು ತಲಾ ೨೦.೧೮ ಹಾಗೂ ೨೫.೨೦ ಎಕರೆ ಜಾಗದ ವ್ಯಾಪ್ತಿಗೆ ಅನುಮತಿ ನೀಡಿದೆ. ಆದರೆ ಅನುಮತಿ ಪಡೆದಿರುವ ಜಾಗಕ್ಕಿಂತ ಹೆಚ್ಚಿನ ಜಾಗದಲ್ಲಿ ಗಣಿಗಾರಿಕೆ ನಡೆದಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

 

ಎಂಎಂಎಲ್ ಸಂಸ್ಥೆಯು ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂಗರ್ಭ ಇಲಾಖೆಯಿಂದ ಅಗತ್ಯ ಪರವಾನಿಗೆಯನ್ನು ಪಡದೇ ಗಣಿಗಾರಿಕೆ ಮಾಡುತ್ತಿರುವುದು ಎಂದು ತನ್ನ ಕಾರ್‍ಯವನ್ನು ಸಮರ್ಥಿಸಿಕೊಂಡಿದೆ.

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com