|
ಸಿಎಂ ಪತ್ನಿಗೆ
ಆರೆಸ್ಸೆಸ್ ಕಾರ್‍ಯಕ್ರಮದ ಚಿಂತೆ?
ಆಹ್ವಾನವನ್ನು ಪರಾಂಬರಿಸುವಂತೆ ಪತ್ನಿಗೆ ಸಿಎಂ ಸೂಚನೆ
ಬೆಂಗಳೂರು:
ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪ್ರೇರಿತವಾಗಿ
ರೂಪಿತವಾಗಿರುವ ರಾಷ್ಟ್ರ ಸೇವಿಕಾ ಸಮಿತಿಯು ಅಗಸ್ಟ್ ೧೫ ರಂದು ನಡೆಯುವ
ಗುರು ದಕ್ಷಿಣಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯ ಪತ್ನಿ ಅನಿತಾ
ಕುಮಾರಸ್ವಾಮಿಯನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ.
ಸಮಿತಿಯ
ದಕ್ಷಿಣ ಕರ್ನಾಟಕ ಘಟಕದ ಮುಖ್ಯಸ್ಥೆ ಅರುಣಾ.ಟಿ, ಈ ಬಾರಿಯ
ಕಾರ್ಯಕ್ರಮಕ್ಕೆ ಸಮಾಜ ಸೇವೆಯ ಕ್ಷೇತ್ರದಲ್ಲಿರುವವರನ್ನು
ಕರೆಯಬೇಕೆಂದು ನಿರ್ಣಯಿಸಿದ್ದೆವು. ಅದರಂತೆ ಅನಿತಾ
ಕುಮಾರಸ್ವಾಮಿಯನ್ನು ಆಹ್ವಾನಿಸಲಾಗಿದೆ ಎಂದಿದ್ದಾರೆ.
ಆದರೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಈ ಬಗ್ಗೆ ಮಾತನಾಡುತ್ತಾ
ಬಿಜೆಪಿಯ ವಿಮಲಾ ಗೌಡ ನೀಡಿದ ಆಹ್ವಾನಕ್ಕೆ ನನ್ನ ಪತ್ನಿ ಒಪ್ಪಿಗೆ ನೀಡಿರುವುದು
ನಿಜ. ಆದರೆ ಸಂಸ್ಥೆಯ ಬಗ್ಗೆ ಸ್ವಲ್ಪ ತಿಳುವಳಿಕೆ ಪಡೆದು ಮುಂದಿನ ನಿರ್ಣಯ
ತೆಗೆದು ಕೊಳ್ಳುವಂತೆ ತಾವು ಪತ್ನಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ. |