|
ಮಾಹಿತಿ ಹಕ್ಕು ಕಾಯಿದೆ
ಬಳಸಿ: ಇನ್ಫಿ ನಾರಾಯಣ ಮೂರ್ತಿ
ಬೆಂಗಳೂರು: ಮಾಹಿತಿ ಹಕ್ಕು
ಕಾಯಿದೆಯು ಬಳಕೆಯಾಗದೆ ಕಳೆಗುಂದುತ್ತಿದೆ ಎಂದು ಇನ್ಫೋಸಿಸ್‌ನ ಅಧ್ಯಕ್ಷ ಮತ್ತು ಮುಖ್ಯ
ಮಾರ್ಗದರ್ಶಿ ಎನ್. ನಾರಾಯಣ ಮೂರ್ತಿ ಹೇಳಿದ್ದಾರೆ.
ಬೆಂಗಳೂರಿನ ಐಐಎಂಬಿಯ
ಪ್ರಾಧ್ಯಾಪಕ ಪಿ.ಮುರಳಿ ಬರೆದಿರುವ ಆರ್ಥಿಕತೆ
ಮತ್ತು ಇಂದಿನ ಮಾರುಕಟ್ಟೆ
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ನಾರಾಯಣ ಮೂರ್ತಿ ಸಾರ್ವಜನಿಕರಿಗೆ
ಪಾರದರ್ಶಕತೆಯ ಪರಿಚಯ ಮಾಡಿಕೊಡಲು ಇದ್ದ ಅಸ್ತ್ರವೆಂದರೆ ಅದು ಮಾಹಿತಿ ಹಕ್ಕು
ಕಾಯಿದೆ ಆಗಿದೆ. ಈ ಕಾಯಿದೆಯ ಮೂಲಕ ಜನರು ಅಗತ್ಯ ಮಾಹಿತಿಯನ್ನು ನಿಗದಿತ ಅವಧಿಯಲ್ಲಿ
ಪಡೆಯಬಹುದು.
ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು
ತರಲು ಪ್ರಸ್ತುಪ ರೂಪದಲ್ಲಿರುವ ಈ ಕಾಯಿದೆ ಸಾಧನವಾಗಬೇಕೆ ಎಂದರು. ಉದಾರೀಕರಣದ
ಬಗ್ಗೆ ಮಾತನಾಡುತ್ತಾ ಉದಾರೀಕರಣದಿಂದ ದೇಶದ ಆರ್ಥಿಕತೆಯಲ್ಲಿ ಮೂಲಭೂತ ಹಾಗೂ ನಿರ್ಮಾಣಾತ್ಮಕವಾದ
ಬದಲಾವಣೆಗಳಾಗಿರುವುದೇನೊ ನಿಜ ಆದರೆ ಇನ್ನೂ ಹಳ್ಳಿಗಳಿಗೆ ಅದು ತಲುಪಿಲ್ಲ. ಆರೋಗ್ಯ ಹಾಗೂ
ಶಿಕ್ಷಣಕ್ಕೆ ಮಹತ್ವ ನೀಡಿದರೆ ಹಳ್ಳಿಗಳಲ್ಲೂ ಸುಧಾರಣೆ ಕಾಣಬಹುದಾಗಿದೆ ಎಂದರು.
ಸರ್ಕಾರಿ ಸ್ವಾಮ್ಯದಿಂದ ಪ್ರಾಥಮಿಕ
ಹಾಗೂ ಮಾಧ್ಯಮಿಕ ಶಾಲೆಗಳನ್ನು ಮುಕ್ತಗೊಳಿಸಬೇಕು. ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಲು
ಸರ್ಕಾರ ಒಪ್ಪಿಗೆಗೆ ಕಾಯುವುದು ಸರಿಯಲ್ಲ.
ಸರ್ಕಾರವು
ಗ್ರಾಮಾಂತರ ಪ್ರದೇಶದಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಸಮರ್ಪಕವಾಗಿ ರೂಪಿಸಿಲ್ಲ. ಪೋಷಕರು
ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದಿದ್ದಾರೆ. |