|
ದಕ್ಷಿಣೆ ಕೇಳಿದ ಸಾಫ್ಟ್‌ವೇರ್
ಇಂಜಿನಿಯರ್‌ಗೆ ಜೈಲು
ಬೆಂಗಳೂರು: ವರದಕ್ಷಿಣೆ
ಕಿರುಕುಳ ಆರೋಪದ ಮೇಲೆ ಸಾಫ್ಟ್‌ವೇರ್ ಇಂಜಿನೀಯರ್‌ಗೆ ೭ ವರ್ಷ ಕಠಿಣ ಶಿಕ್ಷೆಯನ್ನು
ನೀಡಲಾಗಿದೆ. ಜೊತೆಗೆ ದಂಡರೂಪದಲ್ಲಿ ೫೦,೦೦೦ ರೂ ಅನ್ನು ಕಟ್ಟ ಬೇಕಾಗುತ್ತದೆ. ಪೋಲಿಸರ
ಪ್ರಕಾರ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾದ ಸುನಿಲ್ ಸುಲ್ಹೊತ್ರ ಹಾಗೂ ಸೀತ ೨೦೦೩
ರಲ್ಲಿ ಮದುವೆಯಾಗಿದ್ದರು. ಕೆಲವು ತಿಂಗಳ ನಂತರ ಸುನಿಲ್ ಹಾಗೂ ಅವನ ಮನೆಯವರು
ವರದಕ್ಷಿಣೆಗಾಗಿ ಕಿರುಕುಳ ನೀಡಲಾರಂಭಿಸಿದರು. ಹೆಂಡತಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು
೨೦೦೪ರಲ್ಲಿ ಚೆನ್ನೈಗೆ ತರಬೇತಿಗೆಂದು ಹೋದ ಸುನಿಲ್ ಈ ವಿಷಯವನ್ನು ಸೀತಳ ಮನೆಯವರಿಗೆ
ತಿಳಿಸಿರಲಿಲ್ಲ.
ವಿಷಯ ತಿಳಿದ ಸೀತಳ ಮನೆಯವರು
ಅವಳನ್ನು ಬಸವನಗುಡಿಯ ತಮ್ಮ ಮನೆಗೆ ಕರೆದೊಯ್ದ ಕೆಲದಿನಗಳ ನಂತರ ಸೀತ
ಅತ್ಮಹತ್ಯೆ ಮಾಡಿಕೊಂಡಳು. ಸೀತಳ ತಂದೆ ಕೊಟ್ಟ ದೂರಿನ ಅನ್ವಯ ತನಿಕೆ ನಡೆಸಿ ಅಪರಾಧಿಗೆ
ಕಡೆಗೂ ಶಿಕ್ಷೆ ಸಿಗುವಂತಾಯಿತು ಎಂದು ಪೋಲಿಸ್ ಅಧಿಕಾರಿಗಳು ಹೇಳಿದರು. |