Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಭದ್ರಾ ಮೇಲ್ದಂಡೆ ಯೋಜನೆಗೆ ರೈತ ಸಂಘ ವಿರೋಧ

ಶಿವಮೊಗ್ಗ: ಭದ್ರಾ ಮೇಲ್ದಂಡೆ ಯೋಜನೆಗಾಗಿ ಭದ್ರಾ ನದಿಯಿಂದ ೬.೫ ಟಿಎಂಸಿ ನೀರು ಎತ್ತುವುದರಿಂದ ಹೋಸಪೇಟೆ ಹಾಗೂ ರಾಯಚೂರು ಭಾಗದ ಜನರಿಗೆ ನೀರಿನ ಬರ ಪರಿಸ್ಠಿತಿ ತಲೆದೋರಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಹೆಚ್. ಅರ್. ಬಸವರಾಜಪ್ಪ ಹೇಳಿದ್ದಾರೆ.

 

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬಸವರಾಜಪ್ಪ ಭದ್ರಾ  ಜಲಾಶಯದಲ್ಲಿ ಗರಿಷ್ಠ ಮಟ್ಟ ೬೧.೭ ಟಿಎಂಸಿ ಯಾಗಿದ್ದು ಕಳೆದ ನಾಲ್ಕು ವರ್ಷದಿಂದ ೫೪ ಟಿಎಂಸಿಗಿಂದ  ಹೆಚ್ಚು ಶೇಖರಣೆಯಾಗಿಲ್ಲ ಪರಿಸ್ಥಿತಿ ಹೀಗಿರುವಾಗ ಭದ್ರಾ ಮೇಲ್ದಂಡೆ ಯೋಜನೆಗೆ ನೀರನ್ನು ಎಲ್ಲಿಂದ ಪೂರೈಸುವುದು ಎಂದರು.

 

ಜಲ ಸಂಪನ್ಮೂಲ ಸಚಿವ ಕೆ. ಎಸ್. ಈಶ್ವರಪ್ಪ ಭದ್ರಾ ಮೇಲ್ದಂಡೆ ಯೋಜನೆಗೆ ತಗಲುವ ಅಂದಾಜು ವೆಚ್ಚವನ್ನು ಸರಿಯಾಗಿ ಹೇಳಿಲ್ಲ.

 

ಭದ್ರಾ ಕಾಲುವೆಗೆ ನವೀಕರಣಕ್ಕೆ ತಗುಲುವ ಅಂದಾಜು ವೆಚ್ಚ ೧,೨೦೦ ಕೋಟಿ ರೂ ಆಗುತ್ತದೆ. ಆದರೆ ಸಚಿವ ಈಶ್ವರಪ್ಪ ೪೭೧ ಕೋಟಿ ರೂ ಎಂದು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದು ಬಸವರಾಜು ಹೇಳಿದ್ದಾರೆ. ಈ ಯೋಜನೆಯ ಬಗ್ಗೆ ಸ್ಥಳೀಯ ರೈತ ಮುಖಂಡರ ಒಪ್ಪಿಗೆ ಪಡೆದಿರುವುದಾಗಿ ಈಶ್ವರಪ್ಪ ಹೇಳಿದ್ದಾರೆ. ಆದರೆ ಯಾವ ಸಂಘದೊಡನೆಯೂ ಚರ್ಚಿಸಿಲ್ಲ ಎಂದು ಬಸವರಾಜು ಹೇಳಿದ್ದಾರೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com