|
|
|
Monday, 04 September 2006 04:46 PM |
|
`ದೇಶದಲ್ಲಿ ಆಲ್‌ಖೈದಾ ಇರೋದು ನಿಜ
ನವದೆಹಲಿ :
ಭಾರತದಲ್ಲಿ ಕೆಲಸ ಮಾಡುತ್ತಿರುವ ಉಗ್ರರ ಗುಂಪುಗಳು ಆಲ್‌ಖೈದಾದ ಜೊತೆಗೆ
ಸಂಬಂಧ ಹೊಂದಿರುವುದು ನಿಜ ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.
ಕೆ. ನಾರಾಯಣನ್ ಮೊತ್ತ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ.
ಎನ್‌ಡಿಟಿವಿಯ ಪ್ರಣವ್
ರಾಯ್ ಜೊತೆ ಮಾತನಾಡುತ್ತಿದ್ದ ನಾರಾಯಣನ್ ಸೂಕ್ಷ್ಮ ಪ್ರದೇಶವಾದ ಚೆನ್ನೈಯ
ಕಲ್ಪಾಕಂ ಅಣು ಕೇಂದ್ರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು
ಉಗ್ರಗಾಮಿಗಳು ದಾಳಿ ನಡೆಸುವ ಭೀತಿಯಿರುವುದರಿಂದ ಆ ಹಿನ್ನೆಲೆಯಲ್ಲಿಯೂ ಅಗತ್ಯ ಭದ್ರತೆಗಾಗಿ
ಕ್ರಮಕೈಗೊಳ್ಳಲಾಗುವುದು ಎಂದು ಅಭಿಪ್ರಾಯಪಟ್ಟಿದ್ದಾರೆ. |
|
Print
this page |
ಮುಖಪುಟ |
|
|
|