|
ಪಶ್ಚಿಮಘಟ್ಟದಲ್ಲಿ ಅರಣ್ಯ ಉತ್ಪನ್ನಗಳು ಪರದೇಶಕ್ಕೆ
ಬಿಕರಿ
ಬೆಂಗಳೂರು:
ಪಶ್ಚಿಮಘಟ್ಟದ ಅರಣ್ಯದಿಂದ ಅಮೂಲ್ಯವಾದ ಉತ್ಪನ್ನಗಳು ಪರದೇಶಕ್ಕೆ ರವಾನೆಯಾಗುತ್ತಿರುವ
ಬಗ್ಗೆ ಇದ್ದ ಗುಮಾನಿಯು ನಿಜವಾಗಿದೆ. ಶಿವಮೊಗ್ಗ ಅರಣ್ಯ ಸಂಚಾರಿ ದಳದ ಉಪ ಸಂರಕ್ಷಣಾ
ಅಧಿಕಾರಿ ಕೆ . ಎನ್, ಲಕ್ಷ್ಮಿನಾರಾಯಣನ್ ಹೆಚ್ಚುವರಿ ಮುಖ್ಯ ಸಂರಕ್ಷಣಾಧಿಕಾರಿ (ಗುಪ್ತದಳ),
ಬೆಂಗಳೂರಿಗೆ ಬರೆದಿರುವ ಪತ್ರದಲ್ಲಿ ಕೆಳಗಿನ ಅಂಶ ಗಳನ್ನು ಬರೆದಿದ್ದಾರೆ.
ಶಿವಮೊಗ್ಗ ಸುತ್ತಮುತ್ತಲಿನ
ಅರಣ್ಯ ಪ್ರದೇಶದಿಂದ ಅತ್ಯಮೂಲ್ಯ ಅರಣ್ಯ ಉತ್ಪನ್ನಗಳು, ನಶಿಸಿಹೋಗುತ್ತಿರುವ
ಸಸ್ಯರಾಶಿಯ ನಾಶ ಹಾಗೂ ಮಾರಾಟ ಅವ್ಯಾಹತವಾಗಿ ನಡೆದಿದೆ.
ಮುಂಬಯಿ
ಕಾಳಸಂತೆಯಲ್ಲಿ ಶಿವಮೊಗ್ಗ ಅರಣ್ಯದಲ್ಲಿ ಬೆಳೆದ ದೂರ್ವಸೆ ಮರದ ಕಾಂಡದ ಬೆಲೆ ೬೦
ಯುಎಸ್ ಡಾಲರ್ ಇದೆ. ದಂಧೆಗೆ ಅನುಕೂಲವಾಗಲೆಂದು ಭಾರಿ ಬೇಡಿಕೆಯಿರುವ ಈ ಮರದ
ಕಾಂಡವನ್ನು ರಾಮ ಪತ್ರೆ ಎಂಬ ಬೇರೆ ಹೆಸರಿಟ್ಟು ಸಂಚಾರ ಅನುಮತಿಯನ್ನು ಪಡೆಯಲಾಗುತ್ತಿದೆ.
ಕಳ್ಳ ಸಾಗಣಿಕೆದಾರರ
ಜೊತೆ ಕೆಲ ಅಧಿಕಾರಿಗಳು ಶಾಮೀಲಾಗಿರುವ ಶಂಕೆಯನ್ನು ನಾರಾಯಣನ್ ವ್ಯಕ್ತಪಡಿಸಿದ್ದಾರೆ. |