|
ಕಲಾಕ್ಷೇತ್ರದ ಬಳಿ
ಶಿಲ್ಪಕಲಾ ಉದ್ಯಾನ ಸ್ಥಾಪನೆ
ಬೆಂಗಳೂರು:
ಪುರಭವನ ಹಾಗೂ ರವೀಂದ್ರ ಕಲಾಕ್ಷೇತ್ರದ ನಡುವೆ ಇರುವ ಎರಡು ಎಕರೆ
ವಿಸ್ತೀರ್ಣದ ಜಾಗದಲ್ಲಿರುವ ಉದ್ಯಾನವನದಲ್ಲಿ ಶಿಲ್ಪಕಲಾ ಕೃತಿಗಳು ತಲೆದೋರಲಿವೆ.

ಸುವರ್ಣ ಕರ್ನಾಟಕದ
ಮಹೋತ್ಸವದ ಅಂಗವಾಗಿ ಸುಮಾರು ೨೦ ಕೋಟಿ ವೆಚ್ಚದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ
ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಂಯುಕ್ತವಾಗಿ ಈ ಉದ್ಯಾನವನವನ್ನು ನಿರ್ಮಿಸುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ
ಇಲಾಖೆಯ ಆಯುಕ್ತ ಕೆ. ಎಸ್. ನಿರಂಜನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ
ಶಿಲ್ಪಕಲೆಗಳ ಜೊತೆಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹೊಸ ಪುಸ್ತಕ ಮಳಿಗೆ, ಹೊಸ
ಉಪಹಾರ ಗೃಹವನ್ನು ತೆರಯಲಾಗುವುದು ಎಂದರು.
ಕೇಂದ್ರ
ಕಚೇರಿಯು ಯೋಜನೆಗೆ ೮ ಲಕ್ಷ ಸಹಾಯಧನ ನೀಡಿದೆ. ಉದ್ಯಾನವನದ ಉಸ್ತುವಾರಿಯನ್ನು
ಕೆನರಾ ಬ್ಯಾಂಕ್ ವಹಿಸಿಕೊಳ್ಳುವ ಸಾಧ್ಯತೆಯಿದೆ. ಉದ್ಯಾನವನಕ್ಕೆ ಸಾರ್ವಜನಿಕರಿಗೆ ಮುಕ್ತ
ಪ್ರವೇಶವಿರುತ್ತದೆ.
ಬೆಂಗಳೂರು ಮಹಾನಗರ
ಪಾಲಿಕೆ ನಿರ್ಮಿಸಲಿರುವ ಡಾ.ರಾಜ್ ಪುತ್ತಳಿಯನ್ನು ಉದ್ಯಾನವನದ ಸಮೀಪದಲ್ಲಿ ಇರಿಸುವ
ಸಾಧ್ಯತೆಯಿದೆ. |