|
ಪಿಂಚಣಿ ಪಡೆಯಲು ೧೦ ವರ್ಷ ಸೇವೆ ಸಾಕು
ಬೆಂಗಳೂರು:
ರಾಜ್ಯ ಸರಕಾರಿ ನೌಕರರು ಪಿಂಚಣಿ ಪಡೆಯಲು ನಿಗದಿ ಪಡಿಸಿದ್ದ ಕನಿಷ್ಠ ಸೇವಾವಧಿಯನ್ನು
೧೫ ವರ್ಷಗಳಿಂದ ೧೦ ವರ್ಷಗಳಿಗೆ ಇಳಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಪಿಂಚಣಿ
ಜತೆಗೆ ನಿವೃತ್ತಿ ನಂತರದ ಸೌಲಭ್ಯಗಳಿಗೂ ಇದು ಅನ್ವಯವಾಗಲಿದೆ.

ಆದರೆ ಸ್ವಯಂ ನಿವೃತ್ತಿ,
ಪಡೆಯಲು ಈ ಹಿಂದೆ ನಿಗದಿಗೊಳಿಸದಂತೆ ೧೫ ವರ್ಷ ಸೇವೆ ಮಾಡಬೇಕು
ಅದರಲ್ಲಿ
ಯಾವುದೇ ಬದಲಾವಣೆ ಮಾಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ
ಹೊರಟ್ಟಿ ತಿಳಿಸಿದರು.
ಇತ್ತೀಚಿಗೆ ನೇಮಕ ಮಾಡಿದ
ಪರಿಶಿಷ್ಟ ಜಾತಿ ಮತ್ತು ವರ್ಗದ ಶಿಕ್ಷಕರ ವಯೋಮಿತಿಯನ್ನು ೪೫ ವರ್ಷಕ್ಕೆ ನಿಗದಿಗೊಳಿಸಲಾಗಿತ್ತು.
ಅವರು ನಿವೃತ್ತಿಯಾದಾಗ
೧೩ ವರ್ಷ ಸೇವೆ ಸಲ್ಲಿಸಿದಂತಾಗುತ್ತದೆ. ಹೀಗಾಗಿ ಅವರಿಗೆ ನಿವೃತ್ತಿ ನಂತರದ ಯಾವುದೇ
ಸೌಲಭ್ಯಗಳು ಸಿಗುತ್ತಿರಲಿಲ್ಲ. ಆದ್ದರಿಂದ ಸೇವೆಯ ಅವಧಿಯನ್ನು ಕಡಿತಗೊಳಿಸುವ ನಿರ್ಣಯಕ್ಕೆ
ಬರಲಾಯಿತು ಎಂದು ಬಸವರಾಜ ಹೊರಟ್ಟಿ ಹೇಳಿದರು. |