Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಉಗ್ರರ ವಿಮಾನ ಸ್ಫೋಟ ಸಂಚು ವಿಫಲ

 

ಲಂಡನ್: ಲಂಡನ್‌ನಿಂದ ಅಮೇರಿಕಕ್ಕೆ ತೆರಳುವ ಸುಮಾರು ೧೦ ವಿಮಾನಗಳನ್ನು ಹಾರಾಟದ ಸಮಯದಲ್ಲೇ ಸ್ಫೋಟಿಸುವ ಅಲ್-ಖಾಯಿದಾ ಉಗ್ರರ ಸಂಚನ್ನು ಲಂಡನ್ ಪೊಲೀಸರು ಚಾಣಾಕ್ಷತನದಿಂದ ವಿಫಲಗೊಳಿಸಿ ಬೃಹತ್ ಸಾವು-ನೋವುಗಳನ್ನು ತಪ್ಪಿಸಿದ್ದಾರೆ.

 

ಅಮೇರಿಕಾ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆಸಿದ ದಾಳಿಗಿಂತ ತೀವ್ರ ಸ್ವರೂಪದ ದಾಳಿ ಇದಾಗಲಿತ್ತು ಎಂದು ಲಂಡನ್ ಪೊಲೀಸರು ಹೇಳಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ ಈ ಕೃತ್ಯವನ್ನು ಅಲ್ ಖಾಯಿದಾ ರೂಪಿಸಿತ್ತು.

 

ದ್ರವಾಧಾರಿತ ಸ್ಫೋಟಕಗಳನ್ನು ಬಳಸಿ ವಿಮಾನವನ್ನು ಸ್ಫೋಟಿಸುವ ಮೂಲಕ ಹಲವು ಮಂದಿಯನ್ನು ಬಲಿ ತೆಗೆದುಕೊಳ್ಳುವುದು ಉಗ್ರರ ಲೆಕ್ಕಾಚಾರವಾಗಿತ್ತು. ಆದರೆ ಪೊಲೀಸರ ಸಕಾಲಿಕ ಕಾರ್ಯಚರಣೆಯಿಂದಾಗಿ ಈ ಪ್ರಯತ್ನ ವಿಫಲವಾಗಿದೆ ಎಂದು ಬ್ರಿಟನ್ ಗೃಹಕಾರ್ಯದರ್ಶಿ ಜಾನ್ ರೀಡ್ ಹೇಳಿದ್ದಾರೆ.

 

ಉಗ್ರರ ಸಂಚು ಬಹಿರಂಗಗೊಂಡ ಮರುಕ್ಷಣ ಲಂಡನ್ ಮತ್ತು ಅಮೇರಿಕಾ ಮಧ್ಯದ ವಿಮಾನಯಾನಗಳನ್ನು ರದ್ದುಗೊಳಿಸಲಾಯಿತು. ಅಮೇರಿಕ, ಲಂಡನ್, ಯುರೋಪಿನ ದೇಶಗಳು ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಮಾನ ನಿಲ್ದಾಣಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ದಾಳಿಯನ್ನು ಕಾರ್ಯರೂಪಕ್ಕೆ ತರಲು ಸಜ್ಜಾಗಿದ್ದ ೨೧ ಉಗ್ರರನ್ನು ಬಂಧಿಸಲಾಗಿದೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com