|
ಭಾಷೆ ಕಡ್ಡಾಯ ಆದೇಶಕ್ಕೆ ಹೈ ಕೋರ್ಟ್ ತಡೆಯಾಜ್ಞೆ
ಬೆಂಗಳೂರು:
ಕೇಂದ್ರ ಪಠ್ಯಕ್ರಮ ಶಾಲೆಗಳಿಂದ ರಾಜ್ಯ ಪಠ್ಯಕ್ರಮ ಶಾಲೆಗಳಿಗೆ ದಾಖಲಾಗುವ ೮, ೯ ಮತ್ತು
೧೦ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕೆಂದು
ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಈವರಗೆ ಕೇಂದ್ರ ಪಠ್ಯಕ್ರಮದಿಂದ ರಾಜ್ಯ ಪಠ್ಯಕ್ರಮಕ್ಕೆ ದಾಖಲಾಗುವ ವಿದ್ಯಾರ್ಥಿಗಳಿಗೆ
ಕನ್ನಡ ಭಾಷೆಯ ಬದಲಾಗಿ ಆಂಗ್ಲ ಭಾಷೆಯನ್ನು ಐಚ್ಛಿಕ ವಿಷಯವನ್ನಾಗಿ ಕಲಿಯುವ
ಅವಕಾಶವಿತ್ತು. ಆದರೆ, ಮೇ ೨೫ ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಐಚ್ಛಿಕ
ಆಂಗ್ಲಭಾಷೆಯನ್ನು ರದ್ದು ಪಡಿಸಿ ೧೦ನೇ ತರಗತಿಯವರಗಿನ ವಿದ್ಯಾರ್ಥಿಗಳಿಗೆ ಕನ್ನಡವನ್ನು
ಕಡ್ಡಾಯವಾಗಿ ಕಲಿಯಬೇಕೆಂದು ಆದೇಶ ಹೊರಡಿಸಿತ್ತು. ಜೊತೆಗೆ ಕರ್ನಾಟಕ ಪ್ರೌಢ
ಶಿಕ್ಷಣ ಪರೀಕ್ಷಾ ಮಂಡಳಿಗೆ ಐಚ್ಛಿಕ ಆಂಗ್ಲ ಭಾಷೆಯ ಪರೀಕ್ಷೆಯನ್ನು ನಡೆಸಬಾರದು
ಎಂದು ನಿರ್ದೇಶಿಸಿತ್ತು.
ಸರ್ಕಾರದ
ಆದೇಶದ ವಿರುದ್ಧ ಬೆಂಗಳೂರಿನ ೮೯ ವಿದ್ಯಾರ್ಥಿಗಳು ಸಲ್ಲಿಸಿದ್ದ ರೀಟ್ ಅರ್ಜಿಯನ್ನು
ಪರಿಶೀಲಿಸಿದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಾರೆ. |