ತದಡಿ ಯೋಜನೆಗೆ ಸಮುದ್ರದ ನೀರು ಬಳಕೆ
ಬೆಂಗಳೂರು: ಪರಿಸರವಾದಿಗಳ
ಕಾಳಜಿಗೆ ಮನ್ನಣೆ ನೀಡಿದ ಸಮ್ಮಿಶ್ರ ಸರ್ಕಾರ ಮೆಗಾ ಅಣು ಸ್ಥಾವರ ಯೋಜನೆಯಲ್ಲಿ ಸ್ವಲ್ಪ
ಬದಲಾವಣೆ ಮಾಡಿದೆ.

೪೦೦೦ ಮೆ.ವ್ಯಾ. ಸಾಮರ್ಥ್ಯದ
ಯೋಜನೆಯು ಸಮುದ್ರಕ್ಕೆ ಹತ್ತಿರವಿರುವ ಕಾರಣ ನದಿಯಿಂದ ನೀರು ಬಳಕೆ ಮಾಡುವುದಿಲ್ಲ.
ಅಣು ಸ್ಥಾವರಕ್ಕೆ ಬೇಕಾದ ಜಲಬಳಕೆಯು ಸಮುದ್ರದಿಂದ ಆಗಲಿದೆ ಎಂದು ಶಕ್ತಿ
ಕೇಂದ್ರದ ಮುಖ್ಯ ಕಾರ್ಯದರ್ಶಿ ದಿಲಿಪ್ ಹೇಳಿದ್ದಾರೆ. ಜಲಸಂಸ್ಕರಣ ಘಟಕ ಹಾಗೂ ಇದ್ದಿಲಿನ
ಕಲ್ಮಶದ ನಿರ್ವಹಣೆಗೆ ಪ್ರತ್ಯೇಕ ಘಟಕವನ್ನು ಸ್ಥಾಪಿಸಲಾಗುವುದು ಎಂದರು. ಹೊರಗಡೆಯಿಂದ
ಇದ್ದಿಲನ್ನು ಆಮದು ಮಾಡುಕೊಂಡು ಪರಿಸರ ಹಾನಿಯನ್ನು ಆದಷ್ಟು
ಕಮ್ಮಿಮಾಡಲಾಗುವುದು.
ಯೋಜನೆಗೆ ಬೇಕಾದ
ಇಂಧನದ ಪೂರೈಕೆ ಸಮುದ್ರದ ಮೂಲಕ ಆಗುವುದರಿಂದ ಪ್ರಸ್ತುತ ಯೋಜನೆಗೆಂದು
ನಿಗದಿಯಾಗಿರುವ ಪ್ರದೇಶದಲ್ಲೇ ಕಾರ್ಯನಿರ್ವಹಿಸಲಾಗುವುದು. ಯೋಜನೆಗೆ ಸುಮಾರು
೨೦೦೦ ದಿಂದ ೩೦೦೦ ಎಕರೆ ವಿಸ್ತೀರ್ಣದ ಭೂಪ್ರದೇಶದ ಅಗತ್ಯವಿದೆ. ಮಂಗಳೂರು ಅಥವಾ
ಉಡುಪಿಯ ಕಡಲ ತೀರದಲ್ಲಿ ನೆಲೆಯನ್ನು ಕಾಣಬಹುದು.