ಲಕ್ಷಕ್ಕೂ ಅಧಿಕ ಕನ್ನಡ ಪುಸ್ತಕಗಳು ಆನ್‌ಲೈನ್‌ಗೆ
ಬೆಂಗಳೂರು: ಒಂದು
ಲಕ್ಷಕ್ಕೂ ಅಧಿಕ ಕನ್ನಡ ಪುಸ್ತಕಗಳನ್ನು ಡಿಜಿಟೈಸ್ ಮಾಡಿ ಅಂತರ್ಜಾಲ ತಾಣದಲ್ಲಿ ಹಾಕಲಾಗುವುದು
ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಬೆಂಗಳೂರು ವಿವಿಯ
ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ
ಸಚಿವ ಹೊರಟ್ಟಿ ರಾಜ್ಯ ಸರ್ಕಾರವು ಪ್ರಸ್ತುತ ಯೋಜನೆಗೆ ಅಮೇರಿಕಾದ ಕಾರ್ನೆಗೆ ಮೆಲ್ಲಾನ್
ವಿಶ್ವವಿದ್ಯಾಲಯ ನೆರವು ಪಡೆಯಲಿದೆ.
ಪ್ರತಿಜಿಲ್ಲೆಯಲ್ಲೂ
ಮಕ್ಕಳಿಗಾಗಿ ಪ್ರತ್ಯೇಕ ಗ್ರಂಥಾಲಯವನ್ನು ಪ್ರಾರಂಭಿಸಲಾಗುವುದು.
ಎಲ್ಲಾ ಕ್ಷೇತ್ರದ ಪುಸ್ತಕದ
ಜೊತೆಗೆ, ಕಂಪ್ಯೂಟರ್, ದೃಶ್ಯ ಹಾಗೂ ಶ್ರವ್ಯ ಮಾಧ್ಯಮದ ಎಲ್ಲಾ ಸಲಕರಣೆಗಳ
ಬಳಕೆ ಮಾಡಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅವಶ್ಯವಿರುವ ಎಲ್ಲಾ ರೀತಿಯ ಸೌಲಭ್ಯವನ್ನು
ಒದಗಿಸಲಾಗುವುದು.
ಖಾಸಗಿ ಸಂಸ್ಥೆಗಳ ನೆರವಿನಿಂದ
ಸಾರ್ವಜನಿಕ ಗ್ರಂಥಾಲಯ ಕೇಂದ್ರವು ಹಳ್ಳಿಗಳಲ್ಲಿ ಗ್ರಾಮ ಮಾಹಿತಿ ಕೇಂದ್ರ ಸ್ಥಾಪನೆ ಮಾಡಲು
ಮುಂದಾಗಿದೆ ಎಂದು ಸಚಿವರು ಹೇಳಿದರು.
ಗ್ರಂಥಾಲಯವನ್ನು
ಗಣಕೀರಣ ಮಾಡುವುದರಿಂದ ಎಲ್ಲಾ ವಿಶ್ವವಿದ್ಯಾಲಯಗಳ ಮಾಹಿತಿಯನ್ನು ಪಡೆಯುವುದು
ಸುಲಭವಾಗಲಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯದ ನಿರ್ವಾಹಕ ಪಿ
.ವಿ. ಕುಮಾರ್ ಈ ಸಂದರ್ಭದಲ್ಲಿ ಹೇಳಿದರು.