ಬೆಂಗಳೂರು:
ಕೆಪಿಟಿಸಿಎಲ್ ಹಾಗೂ ಎಸ್ಕಾಂ ಜಂಟಿ ಆಶ್ರಯದಲ್ಲಿ ರೂ. ೧೪೦ ಕೋಟಿ ವೆಚ್ಚದಲ್ಲಿ ನಗರದ ವೈಟ್‌ಫೀಲ್ಡ್
ಸಮೀಪ `ಬಣ್ಣದ ಬೆಳಕಿನ ವಸ್ತು ಸಂಗ್ರಹಾಲಯನಿರ್ಮಾಣಗೊಳ್ಳಲಿದೆ.
ಎನರ್ಜಿ ಇಂಜಿನಿಯರ್‍ಸ್
ಹಾಗೂ ನಿರ್ದೇಶಕರು ಕೆಆರ್‌ಇಡಿಎಲ್, ಆಶ್ರಯದಲ್ಲಿ
ಆಯೋಜಿಸಿದ್ದ ವಿದ್ಯುತ್ ಕಾರ್ಯ ಸಮರ್ಥತೆ
ಕುರಿತು ಕಾರ್ಯಾಗಾರದಲ್ಲಿ ನಿಗಮದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ
ಕಾರ್ಯನಿರ್ವಾಹಕ ನಿರ್ದೇಶಕ ವಿಜಯನರಸಿಂಹ ತಿಳಿಸಿದರು.
ವಿಶ್ವ ಸಂಸ್ಥೆಯಿಂದ ನೀಡಲ್ಪಡುವ
೧೦ ಕೋಟಿ ಅನುದಾನ ಈಗಾಗಲೇ ಬಿಡುಗಡೆಯಾಗಿದ್ದು, ವಸ್ತು ಸಂಗ್ರಹಾಲಯ ವಿದ್ಯುಚ್ಛಕ್ತಿಯ
ಕಾರ್ಯ ತತ್ಪರತೆ ಕುರಿತು ಅಧ್ಯಯನ ನಡೆಸಲಿರುವವರಿಗೆ ನೆರವಾಗಲಿದೆ. ಜೊತೆಗೆ
ಮನರಂಜನೆಯೂ ದೊರಕಲಿದೆ ಎಂದು ಅವರು ತಿಳಿಸಿದರು.
ಯೋಜನೆಯಂತೆ
ಬೆಂಗಳೂರಿನಲ್ಲಿ ಬಣ್ಣದ ವಸ್ತು ಸಂಗ್ರಹಾಲಯ ನಿರ್ಮಾಣವಾದಲ್ಲಿ ಮುಂದಿನ ವಸ್ತು ಸಂಗ್ರಹಾಲಯ
ಮೈಸೂರಿನಲ್ಲಿ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.