ಪ್ರವಾಹ: ಲಕ್ಷ್ಮೇಶ್ವರದಲ್ಲಿ ಹೆಸರುಕಾಳು ಬೆಳೆ ನಾಶ
ಲಕ್ಷ್ಮೇಶ್ವರ :
ಉತ್ತರಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದ ಸಮಸ್ಯೆಯಿಂದಾಗಿ ಹೆಸರು ಕಾಳಿನ
ಬೆಳೆಯ ಇಳುವರಿಯಲ್ಲಿ ರೈತರಿಗೆ ನಷ್ಟವುಂಟಾಗಿದೆ.
ಇದರೊಂದಿಗೆ
ಉಳ್ಳಾಗಡ್ಡಿ ಇಳುವರಿಯೂ ಕಡಿಮೆಯಾಗಲಿದೆ. ಲಕ್ಷ್ಮೇಶ್ವರ ಹೋಬಳಿಯ ೧೨
ಗ್ರಾಮಗಳಲ್ಲಿ ಬೂದುರೋಗ, ರಸ ಹೀರುವ ಕೀಟಗಳ ಹಾವಳಿಯಿಂದಾಗಿ ಬೆಳೆಗಳ ಇಳುವರಿ
ಕಡಿಮೆಯಾಗಿದೆ. ಪ್ರವಾಹದಿಂದಾಗಿ ರೈತರು ಈಬಾರಿ ಮತ್ತೆ ಬರ ಎದುರಿಸುವ ಸಾಧ್ಯತೆ
ಇದೆ. ಲಕ್ಷ್ಮೇಶ್ವರ ಗ್ರಾಮದ ಒಟ್ಟು ೩,೭೦೦ ಎದರೆ ಪ್ರದೇಶದಲ್ಲಿ ಬಿತ್ತಿರುವ ಉಳ್ಳಾಗಡ್ಡಿ
ಕೀಟಗಳಿಗೆ ಬಲಿಯಾಗಿವೆ ಎಂದು ಕೃಷಿ ಇಲಾಖೆಯ ಪ್ರಾದೇಶಿಕ ಕಚೇರಿ ಅಭಿಪ್ರಾಯಪಟ್ಟಿದೆ.