Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:46 PM

ಬೆಂಗಳೂರಿನಲ್ಲಿ ೨,೧೧೨ ಕ್ಕೂ ಅಧಿಕ ಎಕರೆ ಭೂ ಒತ್ತುವರಿ

ಬೆಂಗಳೂರು: ಬೆಂಗಳೂರಿನ ಎಂಟಕ್ಕೂ ಅಧಿಕ ಬಡಾವಣೆಗಳಲ್ಲಿ ಸಾವಿರಾರು ಎಕರೆ ಭೂಮಿ ಒತ್ತುವರಿಯಾಗಿರುವುದು ಕಂಡುಬಂದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ ಇದರ ಅಂದಾಜು ಮೊತ್ತ ೪,೪೦೭ ಕೋಟಿಗೂ ಅಧಿಕವಾಗಲಿದೆ. ಇದೆ ಬೆಲೆಯನ್ನು ಮಾರುಕಟ್ಟೆಯ ಇಂದಿನ ದರದ ಪ್ರಕಾರ ಲೆಕ್ಕ ಹಾಕಿದರೆ ೧೦,೦೦೦ ಕೋಟಿಯನ್ನು ಮೀರುತ್ತದೆ.

 

ಬನ್ನೇರುಘಟ್ಟ ರಸ್ತೆ ಬಳಿಯ ಎನ್‌ಎಸ್ ಪಾಳ್ಯ ಕೊಳೆಚೇರಿ, ಬೇಗೂರು ಹೋಬಳಿಯ ಏಳುಕುಂಟೆ(ಹೆಚ್‌ಎಸ್‌ಆರ್ ಬಡಾವಣೆ ಬಳಿ)ಗ್ರಾಮ, ಉತ್ತರಹಳ್ಳಿ ಬಳಿಯ ಕೊತ್ತನೂರು, ಯಡಿಯೂರು, ನಾಗಸಂದ್ರ ಇವು ಈಗ ಬೆಳಕಿಗೆ ಬಂದಿರುವ ಕೆಲವು ಪ್ರದೇಶಗಳಾಗಿವೆ.

 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ವರದಿಯನ್ನು ಎ.ಟಿ ರಾಮಸ್ವಾಮಿ ನೇತೃತ್ವದ ಶಾಸನ ಸಮಿತಿಗೆ ಸಲ್ಲಿಸಿದೆ. ಸಮಿತಿಯ ಸದಸ್ಯರಾದ ಮಾಜಿ ಸಚಿವ ರೋಷನ್ ಬೇಗ್ ಹಾಗೂ ಸದಸ್ಯರಾದ ಎಸ್ ರಘು, ಎಂ. ಬಿ. ಮುನಿವೆಂಕಟಪ್ಪ ನಗರದ ಎಂಟು ಬಡಾವಣೆಯಲ್ಲಿ ಬುಧುವಾರ ಸಮೀಕ್ಷೆ ನಡೆಸಿದರು.

ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಮುಖ್ಯಾಂಶ:

  • ಒತ್ತುವರಿ ಸಂಬಂಧಿತ ಮೊಕದ್ದಮೆಗಳನ್ನು ಒಂದು ವಿಭಾಗೀಯ ಪೀಠಕ್ಕೆ ವರ್ಗಾಯಿಸುವುದು.

  • ಪ್ರತ್ಯೇಕ ಕೋರ್ಟ್ ಸ್ಥಾಪಿಸಿ ಒತ್ತುವರಿಯ ಕೇಸುಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವುದು.

  • ಸರ್ಕಾರಿ ಭೂಮಿಗಳ ನಿರ್ವಾಹಣೆಗಾಗಿ ೨೦೦ ಕ್ಕೂ ಅಧಿಕ ಜನರನ್ನು ನೇಮಕ ಮಾಡುವುದು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕಣ್ಣು ಮುಚ್ಚಿ ಕುಳಿತಿದೆ. ಬಿ.ಡಿ.ಎ ದ ಅಧಿಕಾರಿಗಳೂ ಈ ಅಕ್ರಮ ಒತ್ತುವರಿಯಲ್ಲಿ ಭಾಗಿಗಳಾಗಿರುವ ಸಾಧ್ಯತೆಯಿದೆ. ಬಿಡಿಎ ವಿರುದ್ಧ ಅನೇಕ ಸೈಟುಗಳ ಮಾಲಿಕರು ದಾವೆ ಹೂಡಿದ್ದಾರೆ ಈ ಬಗ್ಗೆ ಕೋರ್ಟ್ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕೆಂದು ಹೇಳಿದೆ. ಒತ್ತುವರಿಯಾಗಿದೆ ಎಂದು ಗುರುತಿಸಲ್ಪಟ್ಟಿರುವ ಪ್ರದೇಶದಲ್ಲಿ ೧೦೦ಕ್ಕೂ ಅಧಿಕ ಕೆರೆಗಳಿದ್ದು ಸುತ್ತ ಮುತ್ತಲಿನ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್, ವಾಣಿಜ್ಯ ಸಂಕೀರ್ಣಗಳಿಂದ ಹೊರಹಾಕಲ್ಪಟ್ಟ ಕಲ್ಮಶದಿಂದ ಕೆರೆಯ ನೀರು ಕೂಡ ಹಾಳಾಗಿ ಹೋಗಿದೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com