೧೬ ಸಾವಿರ ಪೊಲೀಸ್ ನೇಮಕಕ್ಕೆ ಒಪ್ಪಿಗೆ
ಬೆಂಗಳೂರು :
ರಾಜ್ಯದಲ್ಲಿ ೧೬ ಸಾವಿರ ಪೊಲೀಸ್ ಸಿಬ್ಬಂದಿ ನೇಮಕ ಕುರಿತಂತೆ ಹಣಕಾಸು ಇಲಾಖೆಯ ತಾತ್ವಿಕ
ಒಪ್ಪಿಗೆ ದೊರೆತಿದೆ.
ಈ ಸಂಬಂಧ
ರಾಜ್ಯಗೃಹ ಇಲಾಖೆ ಕಳುಹಿಸಿದ್ದ ಕರಡು ಪ್ರಸ್ತಾವನೆಗೆ ಹಣಕಾಸು ಇಲಾಖೆ ತಾತ್ವಿಕ ಒಪ್ಪಿಗೆ
ನೀಡಿದೆ ಎಂದು ಗೃಹಸಚಿವ ಎಂ.ಪಿ.ಪ್ರಕಾಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹೈಕೋರ್ಟ್, ವಿಧಾನ
ಸೌಧ, ವಿಕಾಸ ಸೌಧ, ಬಹುಮಹಡಿ ಕಟ್ಟಡಗಳ ಭದ್ರತಾ ದೃಷ್ಟಿಯಿಂದ ೬೬೦ ಪೊಲೀಸ್
ಸಿಬ್ಬಂದಿ ಅಗತ್ಯವಿದ್ದು, ೭೯ ಹೊಯ್ಸಳ ಸಂಚಾರಿ ಪೊಲೀಸ್ ಪಡೆಗೆ, ೨೧೯೨ ಹುದ್ದೆಗಳ ಭರ್ತಿಗೆ
ಅನುಮತಿ ನೀಡುವಂತೆ ಕೋರಲಾಗಿದೆ ಎಂದು ಅವರು ಹೇಳಿದ್ದಾರೆ.