ಜಯಲಲಿತಾ ವಿರುದ್ಧ ಇನ್ನೊಂದು
ಸಿಬಿಐ ಕೇಸು
ನವದೆಹಲಿ :
ಉಡುಗೊರೆಯಾಗಿ ೨ಕೋಟಿ ರೂಗಳನ್ನು ಸ್ವೀಕರಿಸಿದ್ದಾರೆ ಎನ್ನಲಾದ ಹತ್ತು ವರ್ಷಗಳ
ಹಳೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ
ವಿರುದ್ಧ ಸಿಬಿಐ ಆರೋಪ ಪಟ್ಟಿ ದಾಖಲಿಸಿದೆ.
ಜಯಲಲಿತಾ ಸೇರಿದಂತೆ
ಇಬ್ಬರು ತಮಿಳುನಾಡಿನ ಸಚಿವರ ವಿರುದ್ಧ ಆರೋಪ ಪಟ್ಟಿಯನ್ನು ಸಿಬಿಐ ದಾಖಲಿಸಿದೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ
ತಮಿಳು ನಾಡು ವಿಧಾನ ಸಭಾಧ್ಯಕ್ಷರಿಂದ ಖಟ್ಲೆ ಹೂಡಲು ಅನುಮತಿ ಪಡೆದ ಬಳಿಕ ಸಿಬಿಐ,
ಚೆನ್ನೈನ ಸಿಬಿಐ ಕೇಸುಗಳ ಪ್ರಧಾನ ವಿಶೇಷ ನ್ಯಾಯಮೂರ್ತಿಯವರ ಮುಂದೆ ಆರೋಪ
ಪಟ್ಟಿ ಸಲ್ಲಿಸುವಲ್ಲಿ ಯಶಸ್ವಿಯಾಗಿದೆ.