Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಗೂಢಚಾರಿಕೆ :ರಾಗ ಬದಲಿಸಿದ ಜಸ್ವಂತ್ !

ನವದೆಹಲಿ: ಪಿ.ವಿ.ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಅವರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬ ಅಮೆರಿಕಾದ ಪರವಾಗಿ ಗೂಢಚಾರ ಮಾಡುತ್ತಿದ್ದ ಎಂದು ತಮ್ಮ ಪುಸ್ತಕದಲ್ಲಿ ಬರೆದಿದ್ದಲ್ಲದೇ, ಆ ವ್ಯಕ್ತಿಯ ಹೆಸರನ್ನು ತಾವು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೂ ತಿಳಿಸಿದ್ದೇನೆ ಎಂದು ಎರಡು ದಿನಗಳ ಹಿಂದೆ ಹೇಳಿಕೆ ನೀಡಿದ್ದ ಮಾಜಿ ವಿದೇಶಾಂಗ ಸಚಿವರಾದ ಜಸ್ವಂತ್ ಸಿಂಗ್, ಆ ಗೂಢಚಾರನ ಹೆಸರು ತಮಗೂ ತಿಳಿದಿಲ್ಲ ಎಂದು ಹೇಳುವ ಮೂಲಕ ಪ್ರಕರಣದಿಂದ ಜಾರಿಕೊಳ್ಳಲು ಯತ್ನಿಸಿದ್ದಾರೆ.

 

ಈ ಮೊದಲು ಪ್ರಧಾನಿ ಮನಮೋಹನ್ ಸಿಂಗ್‌ಗೆ ಬರೆದ ಪತ್ರದಲ್ಲಿ ಗೂಢಾಚಾರನ ಹೆಸರು ಬರೆದಿದ್ದೇನೆ ಎಂದಿದ್ದ ಜಸ್ವಂತ್ ಸಿಂಗ್, ನಿನ್ನೆ ಹೇಳಿಕೆ ನೀಡಿ ಗೂಢಾಚಾರಿ ಯಾರೆಂದು ನನಗೆ ಗೊತ್ತಿಲ್ಲ. ಕೇವಲ ಶಂಕೆಯಿಂದಷ್ಟೇ ಆ ಬಗ್ಗೆ ಬರೆದಿದ್ದೇನೆ ಎಂದು ಉಲ್ಟಾ ಹೊಡೆದಿದ್ದಾರೆ.

 

 

ಅಲ್ಲದೇ, ದೇಶದ್ರೋಹಿ ಗೂಢಚಾರನ ಕುರಿತು ರಾಜ್ಯಸಭೆಯಲ್ಲಿ ಯಾವುದೇ ಪ್ರಶ್ನೆ ಎದುರಾದರೂ ನಾನದಕ್ಕೆ ಸೂಕ್ತ ಉತ್ತರ ನೀಡಲಿದ್ದೇನೆ ಎಂದಿದ್ದಾರೆ ಜಸ್ವಂತ್.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com