ಗಡಿವಿವಾದ :
ಆ.೮ರಂದು ದೆಹಲಿಗೆ ಸರ್ವಪಕ್ಷ
ಮಹಾಜನ್
ಆಯೋಗದ ವರದಿಗೆ ಬದ್ಧ
ಬೆಂಗಳೂರು :
ಗಡಿವಿವಾದವನ್ನು ಮತ್ತೆ ಕೆಣಕಿರುವ ಮಹಾರಾಷ್ಟ್ರಕ್ಕೆ ಸೂಕ್ತ ಪಾಠ ಕಲಿಸಲು
ನಿರ್ಧರಿಸಿರುವ ರಾಜ್ಯಸರ್ಕಾರ, ಆಗಸ್ಟ್ ೮ರಂದು ದೆಹಲಿಗೆ ಸರ್ವಪಕ್ಷದ ನಿಯೋಗ
ಒಯ್ದು ಪ್ರಧಾನಿಯವರನ್ನು ಭೇಟಿ ಮಾಡಿ ಮಹಾಜನ್ ಆಯೋಗದ ವರದಿಯ ಚೌಕಟ್ಟಿನಲ್ಲಿ
ಸಮಸ್ಯೆ ಬಗೆ ಹರಿಸುವಂತೆ ಒತ್ತಾಯಿಸಲಿದೆ.
ಮುಖ್ಯಮಂತ್ರಿ
ಎಚ್.ಡಿ.ಕುಮಾರ ಸ್ವಾಮಿ ನೇತೃತ್ವದಲ್ಲಿ ಸೋಮವಾರ ನಡೆದ ಸರ್ವಪಕ್ಷಗಳ ಮುಖಂಡರ
ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ನಿಯೋಗವು ರಾಜ್ಯದ
ಇತಿಹಾಸ ಹಾಗೂ ಭೌಗೋಳಿಕ ಅಂಶಗಳ ಆಧಾರದ ಮೇರೆಗೆ ಮನವಿ ಪತ್ರದ ಮೂಲಕ
ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಡಲಿದೆ. ಸರ್ವಪಕ್ಷಗಳ ಸಭೆಯಲ್ಲಿ ಮುಖ್ಯಮಂತ್ರಿ,
ಉಪಮುಖ್ಯಮಂತ್ರಿ, ಕಾನೂನು ಸಚಿವರು, ಮಾಜಿ ಮುಖ್ಯಮಂತ್ರಿ ಧರಂ ಸಿಂಗ್, ವಿಧಾನ ಪರಿಷತ್
ಪ್ರತಿಪಕ್ಷದ ನಾಯಕ ಎಚ್.ಕೆ.ಪಾಟೀಲ್, ಮಾಜಿ ಸಚಿವ ಖರ್ಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ
ಮಾಜಿ ಅಧ್ಯಕ್ಷರಾದ ಪಾಟೀಲ ಪುಟ್ಟಪ್ಪ, ಪ್ರೋ.ಚಂದ್ರಶೇಖರ ಪಾಟೀಲ, ವಾಟಾಳ್ ನಾಗರಾಜ್,
ರಾಘವೇಂದ್ರ ಜೋಶಿ ಮೊದಲಾದ ಗಣ್ಯರು ಸೋಮವಾರ ನಡೆದ ಸಭೆಯಲ್ಲಿ
ಉಪಸ್ಥಿತರಿದ್ದರು.