|
ಮತ್ತೆ ಟ್ರೈಮಿಸ್ಟರ್...
ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಂದ ಸಾಕಷ್ಟು
ದೂರುಗಳಿದ್ದರೂ ಸಹ ಈ ವರ್ಷವೂ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ
ತ್ರೈಮಾಸಿಕ ಪದ್ಧತಿಯನ್ನು ಮುಂದುವರಿಸಲು ಸಾರ್ವಜನಿಕ ಶಿಕ್ಷಣ
ಇಲಾಖೆ ನಿರ್ಧರಿಸಿದೆ.
ಶಿಕ್ಷಕರಿಗೆ ಅಧಿಕ ಹೊರೆಯಾಗುತ್ತಿರುವುದರಿಂದ ನಿಗದಿತ ಅವಧಿಯಲ್ಲಿ
ಪಾಠ ಮುಗಿಸಲಾಗುತ್ತಿಲ್ಲ ಎಂದು ಶಿಕ್ಷಕ ವರ್ಗ ಅಸಮಾಧಾನ ವ್ಯಕ್ತಪಡಿಸಿತ್ತು.
ಈ ಪದ್ಧತಿಯಲ್ಲಿ ಶಿಕ್ಷಕರಿಗೆ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ.
ಈ ಕುರಿತು ಶಿಕ್ಷಕರಲ್ಲಿ ಜ್ಞಾನದ ಕೊರತೆ ಇದೆ, ಆದ್ದರಿಂದ
ಶಿಕ್ಷಕರಲ್ಲಿ ಹೆಚ್ಚಿನ ಅರಿವು ಮೂಡಿಸುವತ್ತ ಶಿಕ್ಷಣ ಇಲಾಖೆ ಗಮನ ಹರಿಸಬೇಕೆಂದು
ಶಿಕ್ಷಣ ತಜ್ಞರು ಸಲಹೆ ನೀಡಿದ್ದರು.
ಮಕ್ಕಳು ಪ್ರತಿದಿನ ಪರೀಕ್ಷೆಯ ಭಯದಲ್ಲೇ ಇರುವಂತಾಗಿದೆ
ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು
ಪರಿಶೀಲಿಸುವುದಾಗಿ ಹೇಳಿದ್ದ ಶಿಕ್ಷಣ ಸಚಿವ ಹೊರಟ್ಟಿಯವರು ಈಗ ಮತ್ತದೇ
ಟ್ರೈಮಿಸ್ಟರ್ ಪದ್ಧತಿಯ ಮೊರೆ ಹೋಗಿದ್ದಾರೆ. |