|
ಮುಲಾಯಂ ಆಸ್ತಿ: ಸಿ.ಬಿ.ಐ ತನಿಖೆ
ಉತ್ತರ ಪ್ರದೇಶದ
ಮುಖ್ಯಮಂತ್ರಿ ಮುಲಾಯಂಸಿಂಗ್ ಯಾದವ್ ಮತ್ತು ಅವರ
ಕುಟುಂಬದ ಸದಸ್ಯರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎನ್ನುವ
ಆರೋಪದ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ನಡೆಸುವಂತೆ ಸುಪ್ರಿಂಕೋರ್ಟ್
ನಿಬಿಐಗೆ ಆದೇಶಿಸಿದೆ.
ಮುಲಾಯಂ
ಪುತ್ರರಾದ ಸಂಸದ ಅಖಿಲೇಶ್, ಪ್ರತೀಕ್ ಮತ್ತು ಸೊಸೆ ಶೀತಲ್
ಅವರ ಆಸ್ತಿಯ ಬಗ್ಗೆಯೂ ತನಿಖೆ ಕೈಗೊಳ್ಳುವಂತೆ ಕೋರ್ಟ್
ಆದೇಶಿಸಿದೆ.
ತನಿಖಾ ವರದಿಗಳನ್ನು
ನ್ಯಾಯಾಲಯಕ್ಕೆ ಸಲ್ಲಿಸುವುದು ಸಾಮಾನ್ಯವಾಗಿ ಪಾಲಿಸುವ ನಿಯಮ.
ಆದರೆ ಇದೇ ಮೊದಲ ಬಾರಿಗೆ ಸುಪ್ರಿಂ ಕೋರ್ಟ್ ಅಪರೂಪದ ನಿಲುವು
ತಳೆದಿದ್ದು, ಮುಲಾಯಂ ಮತ್ತು ಕುಟುಂಬದ ಅಕ್ರಮ ಆಸ್ತಿ
ಗಳಿಕೆಯ ತನಿಖೆಯ ಪ್ರಾಥಮಿಕ ವರದಿಯನ್ನು ಕೇಂದ್ರ ಸರ್ಕಾರಕ್ಕೆ
ಸಲ್ಲಿಸುವಂತೆ ಸಿ.ಬಿ.ಐಗೆ ಸೂಚಿಸಿದೆ.
|