|
ನಾಯಿಗಳಿಗೆ ಮತ್ತೊಂದು ಮಗು ಬಲಿ
ಬೆಂಗಳೂರು: ಮಂಜುನಾಥ್ ಎಂಬ ನಾಲ್ಕು ವರ್ಷದ ಬಾಲಕ
ನಾಯಿಗಳಿಗೆ ಬಲಿಯಾದ ಮತ್ತೊಂದು ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಮೆಲ್ ಬಡಾವಣೆ ನಿವಾಸಿ, ಬೆಮೆಲ್ ಕಾರ್ಖಾನೆ ಸಿಬ್ಬಂದಿ ಮಹೇಶ್ವರ ಮತ್ತು
ಅನ್ನಪೂರ್ಣ ದಂಪತಿಗಳ ಮಗ ಮಂಜುನಾಥ್ ಬುಧೂರ ಸಂಜೆ ಸ್ನೇಹಿತರೊಂದಿಗೆ
ಕಣ್ಣಾ ಮುಚ್ಚಾಲೆ ಆಟ ಆಡುತ್ತಾ, ಬೇಲಿಯೊಂದರ ಹಿಂದೆ ಬಚ್ಚಿಟ್ಟುಕೊಂಡಿದ್ದಾಗ
೧೫-೨೦ ನಾಯಿಗಳ ಗುಂಪು ದಾಳಿ ನಡೆಸಿ ಮಂಜುನಾಥ ಕತ್ತು, ಮುಖ,
ಕೈಕಾಲುಗಳನ್ನು ಕಚ್ಚಿ, ರಕ್ತ ಹೀರಿಕೊಂಡಿವೆ.
ಇತ್ತೀಚೆಗಷ್ಟೇ ಚಂದ್ರಾ ಬಡಾವಣೆಯಲ್ಲಿ ಶ್ರೀದೇವಿ ಎಂಬ ಬಾಲಕಿ ನರಭಕ್ಷಕ
ನಾಯಿಗಳಿಗೆ ಬಲಿಯಾಗಿದ್ದಳು.
ಪ್ರತಿವರ್ಷ ಕೋಟ್ಯಾಂತರ ರೂಪಾಯಿಗಳನ್ನು ಬೀದಿನಾಯಿಗಳ ನಿಯಂತ್ರಣಕ್ಕೆ
ಖರ್ಚು ಮಾಡಲಾಗುತ್ತಿದೆ, ಆಪರೇಷನ್ ಮಾಡಲಾಗಿದೆ, ಲಸಿಕೆ ನೀಡಲಾಗಿದೆ
ಎಂದು ಸುಳ್ಳು ಲೆಕ್ಕ ನೀಡುವ ಸಂಸ್ಥೆಗಳು ಪಾಲಿಕೆಯಿಂದ ಹಣ ಪಡೆಯುತ್ತಿವೆ.
|