|
ಈ
ಬಜೆಟ್ ಅದೆಷ್ಟು ಕೃಷಿಪರ?
ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ ಕೃಷಿ ವಲಯಕ್ಕೆ ಹೆಚ್ಚಿನ ಅನುದಾನ
ನೀಡಿರುವ ಈ ಬಜೆಟ್ ಮೇಲುನೋಟಕ್ಕೆ ಕೃಷಿಪರ ಬಜೆಟ್ ನಂತೆ
ಕಂಗೊಳಿಸುತ್ತಿರುವುದು ನಿಜ...

ನಬಾರ್ಡ್‌ಗೆ ಅನುದಾನ ಹೆಚ್ಚಿಸಲಾಗಿದೆ, ಉದ್ಯೋಗ ಖಾತ್ರಿಯೋಜನೆಯನ್ನು
ಇನ್ನೂ ೧೩೦ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ, ಬೆಳೆವಿಮೆಗೆ ಹಣ ಬಿಡುಗಡೆ ಮಾಡಲಾಗಿದೆ.
ಆದರೆ ದಿಕ್ಕೆಟ್ಟು ಹೋಗಿರುವ ಕೃಷಿರಂಗಕ್ಕೆ ಇನ್ಯಾವ ಯೋಜನೆಗಳೂ
ಚೈತನ್ಯ ತರುವಷ್ಟು ಶಕ್ತಿ ಪಡೆದೇ ಇಲ್ಲ.
೧೯೯೦-೯೧ ರ ವೇಳೆಗೆ ಜಿ.ಡಿ.ಪಿಯಲ್ಲಿ ಕೃಷಿಯ ಪಾಲು ಶೇ.೨೯ರಷ್ಟಿದ್ದರೆ,
೨೦೦೫-೨೦೦೬ ರ ವೇಳೆಗದು ಕೇವಲ ಶೇ ೧೭ರಷ್ಟು... ಈ ಅವಧಿಯಲ್ಲೇ
ಭಾರತದ ಒಂದು ಲಕ್ಷ ರೈತರು ಆತ್ಮಹತ್ಯೆಗೆ ಶರಣಾಗಿದ್ದಲ್ಲವೇ?
ಇತ್ತೀಚೆಗೆ ತಾನೇ
W.T.O ದೋಹಾ ಅಧಿವೇಶನದಲ್ಲಿ ಅಮೆರಿಕಾ, ಯುರೋಪ್, ಜಪಾನ್‌ಗಳು
ತಮ್ಮ ರೈತರಿಗೆ ಸಬ್ಸಿಡಿ ಕಡಿತ ಮೊದಲು ಒಪ್ಪಿಕೊಂಡಿಲ್ಲ. ಆದರೆ ೧೯೯೫ರ
ನಂತರದಿಂದ ಭಾರತದ ರೈತರಿಗೆ ಕೊಡುತ್ತಿದ್ದ ಸಬ್ಸಿಡಿಗಳಲ್ಲಿ ಕಡಿತ
ಮಾಡುತ್ತಲೇ ಬರಲಾಗಿದೆ.
ಕಳೆದ ವರ್ಷ ಡಾ||ಸ್ವಾಮಿನಾಥನ್ ಆಯೋಗ ನೀಡಿದ ವರದಿಯಲ್ಲಿನ
ಅಂಶಗಳಿಗೆ ಗಮನ ನೀಡಿದ್ದರೆ ಈ ಬಜೆಟ್ಟನ್ನು ನಿಜವಾಗಿಯೂ ಕೃಷಿಪರ
ಎನ್ನಬಹುದಿತ್ತು.
ಅಂದಂತೆ, ಈ ವರ್ಷವೂ ಕಾರ್ಪೋರೇಟ್ ವಲಯಕ್ಕೆ ಯಾವುದೇ ಹೊಸ
ತೆರಿಗೆ ಇಲ್ಲ!.
ಕಮಾಲ್ ಕರ್ ದಿಯಾ ಚಿದಂಬರಂ ಸಾಬ್...
|