|
ಗೋಮ್ಮಟನಿಗೆ ೧೦೦೮ ಕಲಶಗಳಿಂದ ಅಭಿಷೇಕ
* ಹರೀಶ್ ಕೆ.ಆದೂರು
ಧರ್ಮಸ್ಥಳ: ಪ್ರಾತ:ಕಾಲ ೭-೩೫ರಿಂದ ಧರ್ಮಸ್ಥಳದ
ಭಗವಾನ್ ಬಾಹುಬಲಿಗೆ ಅಗ್ರೋದಕ ಸಹಿತ ೧೦೦೮ ಕಲಶಗಳಿಂದ ಪಂಚಾಮೃತಪೂರ್ವಕ
ಮಹಾಮಸ್ತಕಾಭಿಷೇಕ ಶುಕ್ರವಾರ ವಿದ್ಯುಕ್ತವಾಗಿ ನಡೆಯಿತು.
ಅತ್ತ ಸೂರ್ಯರಶ್ಮಿಯ ಪ್ರಖರ ಕಿರಣಗಳ ಮಧ್ಯೆ ವೈವಿಧ್ಯಮಯ
ವರ್ಣ ವೈಭವಗಳಿಂದ ಬಾಹುಬಲಿ ಕಂಗೊಳಿಸುತ್ತಿದ್ದ...
ಕ್ಷಣ ಕ್ಷಣಕ್ಕೆ ವರ್ಣ ವೈವಿಧ್ಯಗಳಿಂದ ಕಂಗೊಳಿಸುತ್ತಿದ್ದ ಬಾಹುಬಲಿಯ
ಅಪೂರ್ವ ದೃಶ್ಯವನ್ನು ನೋಡಲು ಊರೂರುಗಳಿಂದ ಭಕ್ತರ ಮಹಾಪೂರವೇ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಜಮಾಯಿಸಿದ್ದರು. ಶತಮಾನದ ಮೊದಲ
ಮಹಾಮಜ್ಜನ ನೋಡಿ ಧನ್ಯತಾ ಭಾವ ತಾಳಿದರು. ಎಲ್ಲರ ಮುಖದಲ್ಲೂ
ಒಂದು ಸಂತೃಪ್ತಿ ಭಾವ ಕಂಡುಬರುತ್ತಿತ್ತು.
ಬಾಹುಬಲಿ ಸ್ವಾಮಿಯ ಶಿಲಾಮೂರ್ತಿ ಮೋಕ್ಷದ ಮೊದಲ ಮೆಟ್ಟಲುಗಳಾದ
ತ್ಯಾಗ, ಆತ್ಮ, ಸಂಯಮ ಮತ್ತು ಅಹಂಕಾರ ನಿಗ್ರಹಗಳ ಪ್ರತೀಕ.
ಬಾಹುಬಲಿ ದಿಗಂಬರ ರೂಪವು ದೈವತ್ವದ ಕಡೆಗೆ ಆಧ್ಯಾತ್ಮವು ಸಾಗುವುದನ್ನು
ಅಡ್ಡಿಪಡಿಸುವ ಐಹಿಕ ಕಾಮನೆ ಮತ್ತು ಆಸೆಗಳ ಮೇಲಿನ ಪೂರ್ಣ ವಿಜಯದ
ಪ್ರತೀಕವೂ ಹೌದು.
ಇಂತಹ ತ್ಯಾಗಮೂರ್ತಿ ಬಾಹುಬಲಿಗೆ ಮಹಾಮಜ್ಜನದ ಸಂಭ್ರಮ. ವಿಶ್ವಶಾಂತಿ,
ವಿಶ್ವಭ್ರಾತೃತ್ವ ಮತ್ತು ಸೌಹಾರ್ದತೆಗಳ ಮೂಲೋದ್ದೇಶದಿಂದ
ಜ.೨೮ರಿಂದ ಒಂದು ವಾರಗಳ ಕಾಲ ಧರ್ಮಸ್ಥಳದ ಪುಣ್ಯನೆಲದಲ್ಲಿ ಸಾಗರೋಪಾದಿಯ
ಭಕ್ತರ ಸಮ್ಮುಖದಲ್ಲಿ ಸಕಲ ವೈದಿಕ ವಿಧಿ, ವಿಧಾನಗಳೊಂದಿಗೆ ಮಹಾಮಜ್ಜನದ
ಪುಣ್ಯಕಾರ್ಯ ಆರಂಭಗೊಂಡಿದೆ. ನಾಳೆ ನಿರ್ವಾಣ ಕಲ್ಯಾಣ ಮತ್ತು ಮಹಾಮಸ್ತಕಾಭಿಷೇಕದೊಂದಿಗೆ
ಈ ಶತಮಾನದ ಮೊದಲ ಮಹಾಮಜ್ಜನ ಮತ್ತು ಧರ್ಮಸ್ಥಳದ ಬಾಹುಬಲಿಯ
ತೃತೀಯ ಮಹಾಮಜ್ಜನ ಸಮಾಪ್ತಿಗೊಳ್ಳಲಿದೆ.
ಒಂದೊಂದು ಕಲಶಗಳ ಅಭಿಷೇಕ ನಡೆಯುವಾಗಲೂ ರತ್ನಗಿರಿ ಬೆಟ್ಟದಲ್ಲಿ
ಸೇರಿದ್ದ ಭಕ್ತರ ಹರ್ಷೋದ್ಗಾರ, ಜಯಕಾರ ಮುಗಿಲು ಮುಟ್ಟುತ್ತಿತ್ತು.
ಬೆಟ್ಟದ ಸುತ್ತೆಲ್ಲ ಇರುವ ಪಶ್ಚಿಮ ಘಟ್ಟದಲ್ಲಿ ಜೈಕಾರ ಪ್ರತಿಧ್ವನಿಸುತ್ತಿತ್ತು....
ಸುಂದರ ರಮ್ಯ ತಾಣ ಧರ್ಮಸ್ಥಳದಲ್ಲಿ ಈ ಎಲ್ಲಾ ರಮ್ಯ ದೃಶ್ಯ
ಇದೀಗ ನೋಡಲು ದೊರಕುತ್ತಿವೆ.
ಮಸ್ತಕಾಭಿಷೇಕದ ಮನೋಹರ ದೃಶ್ಯಗಳು




ಇನ್ನಷ್ಟು
ಎಎಕ್ಸ್‌ಎನ್ ಚಾನೆಲ್ ಮೇಲೆ
ಪ್ರತಿಬಂಧ
ಶಿಲ್ಪಾ ನಿಂದನೆ: ಗಂಭೀರವಾಗಿ
ಪರಿಗಣಿಸಿರುವ ಭಾರತ
ಜ.೨೩ರಂದು ರಾಜ್ಯ
ಚಲನಚಿತ್ರ ಪ್ರಶಸ್ತಿ ಸಮಾರಂಭ
ಕೀಬೋರ್ಡನಲ್ಲಿ ಗಿನ್ನೀಸ್
ದಾಖಲೆ ಮಾಡಿದ ಪ್ಯಾಟ್ರಿಕ್ಸ್
ತಮಿಳುನಾಡು ಶಾಲೆಗಳಲ್ಲಿ
ದೈಹಿಕ ಶಿಕ್ಷೆ ನಿಷಿದ್ಧ
ದೇಶದ ನಿಧಾನಗತಿಗೆ
ಅಧಿಕಾರಶಾಹಿ ಕಾರಣ: ಮೂರ್ತಿ
|