Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 02 February 2007 10:53 AM

ಉತ್ತರ ಕ್ಯಾಲಿಫೋರ್ನಿಯ ಕನ್ನಡಕೂಟದಿಂದ ಸಂಕ್ರಾಂತಿ ಆಚರಣೆ

 

ಸಂಕ್ರಾಂತಿ ರೈತರ ಸಂತೋಷದ ಸುಗ್ಗಿಯ ಹಬ್ಬ. ಈ ಹಬ್ಬವನ್ನು ಭಾರತಾದ್ಯಂತ ಅನೇಕ ಬಗೆಯಲ್ಲಿ ಹಾಗೂ ಅನೇಕ ಹೆಸರಿನಲ್ಲಿ ಆಚರಿಸುತ್ತೇವೆ. ತಮಿಳುನಾಡಿನಲ್ಲಿ ಇದು ಪೊಂಗಲ್ ಆದರೆ, ಪಂಜಾಬಿನಲ್ಲಿ ಲೋಡಿ. ಬಂಗಾಳ ಮತ್ತು ಅಸ್ಸಾಮಿನಲ್ಲಿ ಇದು ಬಿಹು. ಗುಜರಾತು ಮತ್ತು ರಾಜಾಸ್ಥಾನಗಳಲ್ಲಿ ಗಾಳಿಪಟ ಹಾರಿಸುವ ಉತ್ತರಾಯನ. ನೇಪಾಳದಲ್ಲಿ ಇದನ್ನು ಮಾಘಿ ಎನ್ನುತ್ತಾರೆ. ಈ ಹದ ಇನ್ನೊಂದು ವಿಶೇಷವೇನೆಂದರೆ, ಸೌರಮಾನ ಪಧ್ದತಿಯ ಆಧರಿಸಿರುವ ಏಕೈಕ ಹಿಂದು ಹಬ್ಬ ಇದು. ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿಯಿಂದ ಆರಂಭವಾಗುತ್ತದೆ. ಈ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬುದು ಪ್ರಾಚೀನ ಕಾಲದಿಂದಲೂ ನಂಬಿಕೆಯಿದೆ.

ಅಂದಹಾಗೆ ಉತ್ತರ ಕ್ಯಾಲಿಫೋರ್ನಿಯ ಕನ್ನಡಕೂಟವು ಫೆಬ್ರುವರಿ ೩ರಂದು ಸಂಕ್ರಾಂತಿಯ ಹಬ್ಬವನ್ನು ಆಚರಿಸುವುದಕ್ಕೆ ತನ್ನ ಬಾಗಿಲು ತೆರೆದಿದೆ. ಇದು ೨೦೦೭ರ ಸಮಿತಿ ಆಚರಿಸುತ್ತಿರುವ ಮೊದಲ ಕಾರ್ಯಕ್ರಮ. ಸಂಕ್ರಾಂತಿ ಹಬ್ಬದಲ್ಲಿ ಎಳ್ಳು, ಬೆಲ್ಲ, ಕಡ್ಲೆ, ಕೊಬ್ಬರಿಗಳ ಮಿಶ್ರಣವನ್ನು ಬೀರಿದರೆ ನಮ್ಮ ಕನ್ನಡಕೂಟವು ಎಳ್ಳುಬೆಲ್ಲಗಳ ಜೊತೆ ಅನೇಕ ರಸಮಯ ಕಾರ್ಯಕ್ರಮಗಳ ಮಿಶ್ರಣವನ್ನು ನಿಮಗಾಗಿ ಬೀರಲು ಸಜ್ಜಾಗಿ ನಿಂತಿದೆ.


ಹಾಗಾದ್ರೆ ಆ ಮಿಶ್ರಣದಲ್ಲಿ ಏನೇನು ಇವೆ ಅಂತ ಕೇಳ್ತೀರಾ?

ಬೆಟ್ಟ ಮತ್ತು ಅಳಿಲು...ಯಾರು ಹೆಚ್ಚು ಶಕ್ತಿಶಾಲಿ?
ಸುಧಾ ಜೀರಿಗೆಯವರ ಸಣ್ಣ ಮಕ್ಕಳ ತಂಡ

ಅಜ್ಜಿ ಬಂದ್ಲು...ಮ್ಯಾಜಿಕ್ ಅಜ್ಜಿ ಚಿತ್ರದ ಹಾಡು
ಚಿನ್ನು ಮೋಹನ್‌ರವರ ಚಿಣ್ಣರ ತಂಡ

ಕ್ಷೀರಾಬ್ಧಿಕನ್ನಿಕೆ...ಯಾರಿಗೆ ವಧುವಾಗುವೆ?
ಧನ್ಯಾ ಮಧುಸೂದನ್ ಮತ್ತು ಬೃಂದಾ ದೀಕ್ಷಿತ್

ಬೊಂಬೆಯಾಟ...ಕನ್ನಡಕಲಿ ಗುಂಪು
ಪೂರ್ಣಿಮಾ ರಾಮಪ್ರಸಾದ್ ಮತ್ತು ಶ್ರೀವತ್ಸ ದುಗ್ಲಾಪುರ

ಸುಗ್ಗಿ ಕುಣಿತ...ಸಂಕ್ರಾಂತಿಗಾಗಿ
ಮಾಲಿನಿ ಯೋಗೇಶ್‌ರವರ ತಂಡ

ಮಜಾ ಮಿಕ್ಸ್...ನೃತ್ಯ
ಮಂಜುಳಾ ದಿವಾಕರ್‌ರವರ ತಂಡ

ಕನ್ನಡಿಗರೋ ಕನ್ನಡಿಗರು...ನೃತ್ಯ ವೈವಿಧ್ಯ
ಪುಷ್ಪಾ ಸುಬ್ಬರಾವ್‌ರವರ ತಂಡ

ಪಶ್ಚಾತ್ತಾಪ - ಮಾ|| ಹಿರಣ್ಣಯ್ಯನವರ ಪ್ರಸಿದ್ಧ ನಾಟಕ
ಲಾಸ್ ಏಂಜಲೀಸ್‌ನಿಂದ ಬರುತ್ತಿರುವ ವಲ್ಲೀಶ ಶಾಸ್ತ್ರಿಯವರ ತಂಡದಿಂದ

ಸ್ಥಳ : ಸನ್ನಿವೇಲ್ ದೇವಾಲಯದ ಸಭಾಂಗಣ
ದಿನಾಂಕ : ಫೆಬ್ರುವರಿ ೩ ಅಪರಾಹ್ನ ೩ ಗಂಟೆಗೆ

ಕನ್ನಡಕೂಟ ಆಚರಿಸುವ ಸುಗ್ಗಿ ಹಬ್ಬಕ್ಕೆ ತಾವುಗಳೆಲ್ಲರೂ ತಪ್ಪದೇ ಬನ್ನಿ. ನಿಮ್ಮ ಸ್ನೇಹಿತರನ್ನೂ ಬಂಧುಗಳನ್ನೂ ಕರೆತನ್ನಿ. ಹೆಚ್ಚಿನ ವಿವರಗಳಿಗೆ www.kknc.org ತಾಣವನ್ನು ಸಂಪರ್ಕಿಸಿ.

 

ಇನ್ನಷ್ಟು

ಧರ್ಮಸ್ಥಳದ ವಿರಾಗಿಗೆ ಮಹಾಮಜ್ಜನ

ರಾಜಕಾರಣಿಗಳಿಗೆ ಎಚ್‌ಐವಿ ಪರೀಕ್ಷೆ ಕಡ್ಡಾಯ

ಧರೆಗೆ ಮರಳಿದ ವ್ಯೋಮನೌಕೆ

ಗಲಭೆ ನಿಯಂತ್ರಿಸಲು ನೂತನ ಕಾನೂನು:ಸಿಎಂ

ಸದ್ದಿಲ್ಲದೆ ಟಾಟಾ ಕಾಮಗಾರಿ ಶುರು

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com