Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 01 February 2007 06:52 PM

ಧರ್ಮಸ್ಥಳದ ವಿರಾಗಿಗೆ ಮಹಾಮಜ್ಜನ


* ಹರೀಶ್ ಕೆ.ಆದೂರು

 

ಧರ್ಮಸ್ಥಳ: ಕಣ್ಣುಗಳು ತದೇಕಚಿತ್ತದಿಂದ ನೋಡುತ್ತಿತ್ತು... ಮಂದಮೂರ್ತಿ ಹಸನ್ಮುಖಿಯಾಗಿ ಹಾಗೆಯೇ ನಿಂತಿದ್ದ... ಕ್ಷೀರ ಧಾರೆಧಾರೆಯಾಗಿ ಹರಿದು ಬರುತ್ತಿತ್ತು. ಅರಸಿನದ ಅಭಿಷೇಕದಲ್ಲಿ ಸ್ವರ್ಣ ಮೂರ್ತಿಯಾಗಿ, ಚಂದನ ಅಭಿಷೇಕದಲ್ಲಿ ಕೆಂಬಣ್ಣದ ಬಾಹುಬಲಿಯಾಗಿ... ಹೀಗೆ ವೈವಿಧ್ಯಮಯ ವರ್ಣ ವೈಭವಗಳಿಂದ ಅಜಾನುಭಾಹು ಬಾಹುಬಲಿ ಮೂರ್ತಿ ಕಂಗೊಳಿಸುತ್ತಿದ್ದ. ಅಪೂರ್ವ ದೃಶ್ಯವನ್ನು ಜನ ಬಿಟ್ಟಕಣ್ಣುಗಳಿಂದಲೇ ನೋಡಲಾರಂಭಿಸಿದರು. ಇದು ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಂಡು ಬಂದ ದೃಶ್ಯ.
 

ಶತಮಾನದ ಮೊದಲ ಮಹಾಮಜ್ಜನ ಭಾಗ್ಯ ಧರ್ಮಸ್ಥಳದ ವಿರಾಗಿಗೆ ದೊರಕಿತ್ತು. ತ್ಯಾಗಮೂರ್ತಿ ಮಹಾಮಜ್ಜನದಲ್ಲಿ ತನ್ಮಯನಾಗಿದ್ದ... ಭಕ್ತರ ಜಯಘೋಷಗಳು ಮುಗಿಲು ಮುಟ್ಟಿದ್ದವು... ಬಾಹುಬಲಿ ತನ್ಮಯನಾಗಿ ಅಭಿಷೇಕವನ್ನು ಸ್ವೀಕರಿಸುತ್ತಿದ್ದ. ನೂರಾರು ಕ್ಯಾಮಾರಾ ಕಣ್ಣುಗಳು ಈ ಎಲ್ಲ ದೃಶ್ಯವನ್ನು ಸೆರೆಹಿಡಿದು ದಾಖಲಿಸಿದವು...! ಹೊಸ ಇತಿಹಾಸವೊಂದು ನಿರ್ಮಾಣವಾಯಿತು. ಧರ್ಮಸ್ಥಳದ ಬಾಹುಬಲಿಗೆ ತೃತೀಯ ಮಹಾಮಜ್ಜನ ವಿದ್ಯುಕ್ತವಾಗಿ ಆರಂಭಗೊಂಡಿತು.
 

ಮುಂಜಾನೆಯಿಂದಲೇ ರತ್ನಗಿರಿ ಬೆಟ್ಟದಲ್ಲಿ ಭಕ್ತಿಯ ರಸ ಸಿಂಚನಗೊಂಡಿತ್ತು. ಸಾವಿರಾರು ಭಕ್ತರು ವರ್ಣವೈಭವದಿಂದ ಕಂಗೊಳಿಸದ ಗೊಮ್ಮಟನ ಮಜ್ಜನ ವೀಕ್ಷಿಸಲು ಅಣಿಯಾಗಿದ್ದರು. ಅಭಿಷೇಕವನ್ನು ಸಕಲ ಮುನಿವೃಂದ ಹಾಗೂ ಭಟ್ಟಾರಕ ಸ್ವಾಮಿಗಳ ನೇತೃತ್ವದಲ್ಲಿ ನೆರವೇರುತ್ತಿದ್ದತೆ ಜನ ಮೂಕವಿಸ್ಮಿತರಾದರು. ಕಣ್ಣುಗಳನ್ನೇ ನಂಬದಾದರು.
 

ಹೆಗ್ಗಡೆಯವರು ನಿವಾಸದ ಬಳಿಯಿಂದ ರತ್ನಗಿರಿಗೆ ಅಗ್ರೋದಕ ಹಾಗೂ ಪಾರ್ಶ್ವನಾಥ ಬಿಂಬದ ಮೆರವಣಿಗೆ ಮೂಲಕ ಆಗಮಿಸಿದ ಬಳಿಕ ಸಕಲ ಧಾರ್ಮಿಕ ವಿಧಿಗಳನ್ನು ನಡೆದವು. ತದನಂತರ ಬಾಹುಬಲಿಗೆ ಜಲಾಭಿಷೇಕದ ಆರಂಭ. ಅಟ್ಟಳಿಕೆ ಮೇಲೇರಿದ ಹೆಗ್ಗಡೆ ದಂಪತಿ ಹಾಗೂ ಕುಟುಂಬ ಅಭಿಷೇಕ ನೆರವೇರಿಸಿದರು. ಎಳನೀರಿನ ಅಭೀಷೇಕ ಮತ್ತು ಇಕ್ಷುರಸದ ಅಭೀಷೇಕಗಳು ಆರಂಭವಾಗುತ್ತಿದ್ದಂತೆ ಭಕ್ತರ ಉತ್ಸಾಹದ ಏರೆ ಮೀರಿತು... ಜಯಕಾರ ಮುಗಿಲು ಮುಟ್ಟಿತು.
 

ನಂತರ ನಡೆದ ನಾಲ್ಕು ಮಂಡಳಗಳಿಂದ ಕೂಡಿದ ಚತುಷ್ಕೋನ ಅಭಿಷೇಕ, ಕೆಂಪು ವರ್ಣದ ಕೂಡಿದ ಕಷಾಯದ ಅಭಿಷೇಕಗಳು ವರ್ಣ ವೈಭವಕ್ಕೆ ಸಾಕ್ಷಿಯಾದವು. ಗುಲಾಬಿ, ಮಲ್ಲಿಗೆ, ಸಂಪಿಗೆ, ಜಾಜಿ ಹೂಗಳಿಂದ ಅಭಿಷೇಕಗಳು ನಡೆದವು. ಕೊನೆಯಲ್ಲಿ ಬೃಹತ್ ಹೂವಿನ ಮಾಲೆಯನ್ನು ಬಾಹುಬಲಿ ಮೂರ್ತಿಗೆ ಅರ್ಪಿಸಲಾಯಿತು.
 

ನಾಳೆ ೧೦೦೮ ಕಲಶಗಳಿಂದ ಬಾಹುಬಲಿಗೆ ಮಹಾಮಜ್ಜನ ನಡೆಯಲಿವೆ.
 

ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
 

ಇನ್ನಷ್ಟು

ಎಎಕ್ಸ್‌ಎನ್ ಚಾನೆಲ್ ಮೇಲೆ ಪ್ರತಿಬಂಧ

ಶಿಲ್ಪಾ ನಿಂದನೆ: ಗಂಭೀರವಾಗಿ ಪರಿಗಣಿಸಿರುವ ಭಾರತ

ಜ.೨೩ರಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ

ಕೀಬೋರ್ಡನಲ್ಲಿ ಗಿನ್ನೀಸ್ ದಾಖಲೆ ಮಾಡಿದ ಪ್ಯಾಟ್ರಿಕ್ಸ್

ತಮಿಳುನಾಡು ಶಾಲೆಗಳಲ್ಲಿ ದೈಹಿಕ ಶಿಕ್ಷೆ ನಿಷಿದ್ಧ

ದೇಶದ ನಿಧಾನಗತಿಗೆ ಅಧಿಕಾರಶಾಹಿ ಕಾರಣ: ಮೂರ್ತಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com