|
ಬೆಂಗಳೂರಿನಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ
ಬೆಂಗಳೂರು: ರವಿವಾರ ಹಲಸೂರಿನ ಅಂಬೇಡ್ಕರ್
ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮಾವೇಶದ
ಸಂದರ್ಭದಲ್ಲಿ ಮತ್ತೆ ಶಿವಾಜಿ ನಗರ, ಭಾರತೀನಗರದ
ಸುತ್ತಮುತ್ತ ಹಿಂಸಾಚಾರ ಭುಗಿಲೆದ್ದಿದೆ. ಗಲಭೆ ನಿಯಂತ್ರಿಸಲು
ಪೊಲೀಸರು ಗಾಳಿಯಲ್ಲಿ ಗುಂಡುಹಾರಿಸಿದಾಗ ಒಬ್ಬ ಬಾಲಕ
ಮೃತಪಟ್ಟಿದ್ದಾನೆ. ಎಂಟು ಮಂದಿಗೆ ಗುಂಡು ತಗುಲಿ, ೪೦ಕ್ಕೂ ಹೆಚ್ಚು
ಮಂದಿ ಗಾಯಗೊಂಡಿದ್ದಾರೆ.

ಭಾರತೀನಗರದಲ್ಲಿ ಸೋಮವಾರ ಬೆಳಿಗ್ಗೆ ೭ ಗಂಟೆಯ ವರೆಗೆ
ಕರ್ಫ್ಯೂ ವಿಧಿಸಲಾಗಿದೆ.
೩ ಬಿ.ಎಂ.ಟಿ.ಸಿ ಬಸ್, ೨೦ಕ್ಕೂ ಹೆಚ್ಚು ದ್ವಿಚಕ್ರ ವಾಹನ, ೧೨ ಕಾರು
ಮತ್ತು ೬ ಆಟೋಗಳು ಬೆಂಕಿಗೆ ಆಹುತಿಯಾಗಿವೆ. ೩೦೦ಕ್ಕೂ ಹೆಚ್ಚು
ಅಂಗಡಿ, ೧೦ ಮನೆಗಳಿಗೆ ದುಷ್ಕರ್ಮಿಗಳು ಹಾನಿಮಾಡಿದ್ದಾರೆ.
ಶಾಂತಿಯನ್ನು ಕಾಪಾಡಲು ಭಾರತೀನಗರದಲ್ಲಿ ರವಿವಾರದಿಂದ
ಜಾರಿಬರುವಂತೆ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ. ಈ ಪ್ರದೇಶದ
ಶಾಲಾಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ.
ಇನ್ನಷ್ಟು
ಎಎಕ್ಸ್‌ಎನ್ ಚಾನೆಲ್ ಮೇಲೆ
ಪ್ರತಿಬಂಧ
ಶಿಲ್ಪಾ ನಿಂದನೆ: ಗಂಭೀರವಾಗಿ
ಪರಿಗಣಿಸಿರುವ ಭಾರತ
ಜ.೨೩ರಂದು ರಾಜ್ಯ
ಚಲನಚಿತ್ರ ಪ್ರಶಸ್ತಿ ಸಮಾರಂಭ
ಕೀಬೋರ್ಡನಲ್ಲಿ ಗಿನ್ನೀಸ್
ದಾಖಲೆ ಮಾಡಿದ ಪ್ಯಾಟ್ರಿಕ್ಸ್
ತಮಿಳುನಾಡು ಶಾಲೆಗಳಲ್ಲಿ
ದೈಹಿಕ ಶಿಕ್ಷೆ ನಿಷಿದ್ಧ
ದೇಶದ ನಿಧಾನಗತಿಗೆ
ಅಧಿಕಾರಶಾಹಿ ಕಾರಣ: ಮೂರ್ತಿ
|