|
ಸದ್ದಿಲ್ಲದೆ ಟಾಟಾ ಕಾಮಗಾರಿ ಶುರು
ಸಿಂಗೂರ್: ರೈತರ ತೀವ್ರ ಪ್ರತಿಭಟನೆಯ ನಡುವೆಯೂ
ಸಿಂಗೂರಿನಲ್ಲಿ ಟಾಟಾ ಸಣ್ಣ ಕಾರು ಯೋಜನೆಯ ಕಾಮಗಾರಿ ಭಾನುವಾರ
ಸದ್ದಿಲ್ಲದೆ ಆರಂಭಗೊಂಡಿದೆ.
ಕೃಷಿ ಭೂಮಿ ಸ್ವಾಧೀನ ವಿವಾದದ ಹಿನ್ನೆಲೆಯಲ್ಲಿ ೧೦೦೦ ಕೋಟಿ ರೂ.
ವೆಚ್ಚದ ಮಹತ್ವಾಕಾಂಕ್ಷಿ ಯೋಜನೆ ನನೆಗುದಿಗೆ ಬೀಳುವ ಸೂಚನೆ
ಕಂಡುಬಂದಿತ್ತು. ಆದರೆ ಪಶ್ಚಿಮ ಬಂಗಾಳ ಕೈಗಾರಿಕೆ ಅಭಿವೃದ್ಧಿ
ನಿಗಮದ ಅನುಮೋದನೆ ಪಡೆದು, ಟಾಟಾ ಮೋಟಾರ್ ಸಂಸ್ಥೆಯ
ಅಧಿಕಾರಿಗಳು ನಿಷೇಧಾಜ್ಞೆ ನಡುವೆಯೂ ಸ್ಥಳದಲ್ಲಿ ಕಾಮಗಾರಿಗೆ
ಗುದ್ದಲಿ ಪೂಜೆ ನೆರವೇರಿಸಿದರು.
ಟಾಟಾ ಅಧ್ಯಕ್ಷ ರತನ್ ಟಾಟಾ ಅವರ ಕನಸಾದ ೧ ಲಕ್ಷ ರೂ.
ಬೆಲೆಯ `ಪೀಪಲ್ಸ್ ಕಾರ್' ಮುಂದಿನ ವರ್ಷ ರಸ್ತೆಗಿಳಿಯುವ ನಿರೀಕ್ಷೆ
ಇದೆ. ವಿವಾದ ಏರ್ಪಟ್ಟಿದ್ದರೂ ತಾವು ಯೋಜನೆ ಯಿಂದ ಹಿಂದೆ
ಸರಿಯುವುದಿಲ್ಲ ಎಂದು ರತನ್ ಟಾಟಾ ಕಳೆದ ತಿಂಗಳು ತಿಳಿಸಿದ್ದರು.
ಕೆಲವು ಸಾಂಸ್ಥಿಕ ಪ್ರತಿಸ್ಪರ್ಧಿಗಳು ವಿನಾಕಾರಣ ವಿವಾದ
ಸೃಷ್ಟಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
`ಈಗಾಗಲೇ ಗುರಿಯಿರಿಸಿ ಕೊಂಡಂತೆ ೨೦೦೮ಕ್ಕೆ ತಮ್ಮ ಸಂಸ್ಥೆಯ ಸಣ್ಣ
ಕಾರುಗಳು ಮಾರುಕಟ್ಟೆ ಸೇರಲಿವೆ. ಇದಕ್ಕಾಗಿ ಮಾರಾಟಗಾರರನ್ನು
ಗುರುತಿಸುವ ಕಾರ್ಯ ಪೂರ್ಣಗೊಂಡಿದೆ ಎಂದು ಯೋಜನೆಯ
ನಿವೇಶನದಲ್ಲಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಟಾಟಾ
ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.
ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ, ಪಶ್ಚಿಮ
ಬಂಗಾಳ ಸರಕಾರ ತಮಗೆ ವಂಚನೆ ಎಸಗಿದೆ ಎಂದು ಆರೋಪಿಸಿದ್ದಾರೆ.
ಭೂಸ್ವಾಧೀನ ವಿವಾದವನ್ನು ಮಾತುಕತೆಯ ಮೂಲಕ
ಬಗೆಹರಿಸಲಾಗುವುದೆಂದು ರಾಷ್ಟ್ರಪತಿ ಕಲಾಂ, ಪ್ರಧಾನಿ
ಮನಮೋಹನ್ ಸಿಂಗ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಪಾಲ
ಗೋಪಾಲಕೃಷ್ಣ ಗಾಂಧಿ ಅವರ ಭರವಸೆ ಹಿನ್ನೆಲೆಯಲ್ಲಿ ಮಮತಾ
ನಿರಶನ ಕೊನೆಗೊಳಿಸಿದ್ದರು.
ಇನ್ನಷ್ಟು
ಎಎಕ್ಸ್‌ಎನ್ ಚಾನೆಲ್ ಮೇಲೆ
ಪ್ರತಿಬಂಧ
ಶಿಲ್ಪಾ ನಿಂದನೆ: ಗಂಭೀರವಾಗಿ
ಪರಿಗಣಿಸಿರುವ ಭಾರತ
ಜ.೨೩ರಂದು ರಾಜ್ಯ
ಚಲನಚಿತ್ರ ಪ್ರಶಸ್ತಿ ಸಮಾರಂಭ
ಕೀಬೋರ್ಡನಲ್ಲಿ ಗಿನ್ನೀಸ್
ದಾಖಲೆ ಮಾಡಿದ ಪ್ಯಾಟ್ರಿಕ್ಸ್
ತಮಿಳುನಾಡು ಶಾಲೆಗಳಲ್ಲಿ
ದೈಹಿಕ ಶಿಕ್ಷೆ ನಿಷಿದ್ಧ
ದೇಶದ ನಿಧಾನಗತಿಗೆ
ಅಧಿಕಾರಶಾಹಿ ಕಾರಣ: ಮೂರ್ತಿ
|