|
ಧರೆಗೆ ಮರಳಿದ ವ್ಯೋಮನೌಕೆ
ತಿರುವನಂತಪುರಂ: ಭಾರತೀಯ ವಿಜ್ಞಾನಿಗಳು ಪ್ರಥಮ
ಬಾರಿಗೆ ರಾಕೆಟ್ಟಿನಿಂದ ಬೇರ್ಪಡುವ ವ್ಯೋಮನೌಕೆಯನ್ನು ಭೂಮಿಗೆ
ಮರಳುವಂತೆ ನಿರ್ದೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವ್ಯೋಮನೌಕೆಯು ಬಂಗಾಳಕೊಲ್ಲಿಗೆ ಬಂದು ಬಿದ್ದಿದ್ದು ಅದನ್ನು
ಹುಡುಕಿ ಸಮುದ್ರ ಕಿನಾರೆಗೆ ತರುವ ಪ್ರಯತ್ನಗಳು
ನಡೆಯುತ್ತಿವೆ ಎಂದು ಇಸ್ರೋ ಹೇಳಿದೆ.
ಯೋಜನೆಯಂತೆ ಎಲ್ಲಾ ಪ್ರಯೋಗಗಳು ನಡೆದಿವೆಯೇ ಎಂದು
ವಿಜ್ಞಾನಿಗಳು ಪರೀಕ್ಷಿಸಲಿದ್ದಾರೆ. ವಿಶೇಷವಾಗಿ ಪಿಂಗಾಣಿ ಇಟ್ಟಿಗೆಗಳು
ತಮ್ಮ ಉದ್ದೇಶವನ್ನು ಈಡೇರಿಸಿವೆಯೇ ಎಂದು ತಿಳಿಯಲು ಅವರು
ಹೆಚ್ಚಿನ ಗಮನ ಹರಿಸಲಿದ್ದಾರೆ.
ರಷ್ಯಾ, ಅಮೆರಿಕ ಮತ್ತು ಚೀನಗಳು ಮಾತ್ರ ಈ ಸಂಕೀರ್ಣ
ತಂತ್ರಜ್ಞಾನದ ಮೇಲೆ ಪ್ರಭುತ್ವ ಹೊಂದಿದ್ದು, ಭಾರತ ಈಗ ಆ
ಸಾಲಿಗೆ ಸೇರಿದೆ.
ಮಾನವ ಸಹಿತ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವಲ್ಲಿ ಇದು
ಭಾರತದ ಪ್ರಥಮ ಹೆಜ್ಜೆಯಾಗಿದೆ.
ಶ್ರೀಹರಿ ಕೋಟಾದ ಸಾಗರ ಕಿನಾರೆಯ ಪೂರ್ವಕ್ಕೆ ೧೪೦ ಕಿ.ಮೀ
ದೂರದಲ್ಲಿ ೫೫೦ ಕೆ.ಜಿ.ತೂಕದ ಬಾಹ್ಯಾಕಾಶ ನೌಕೆಯನ್ನು ಇಳಿಸಲು
ವಿಜ್ಞಾನಿಗಳು ಯೋಜಿಸಿದ್ದರು.
ಇನ್ನಷ್ಟು
ಎಎಕ್ಸ್‌ಎನ್ ಚಾನೆಲ್ ಮೇಲೆ
ಪ್ರತಿಬಂಧ
ಶಿಲ್ಪಾ ನಿಂದನೆ: ಗಂಭೀರವಾಗಿ
ಪರಿಗಣಿಸಿರುವ ಭಾರತ
ಜ.೨೩ರಂದು ರಾಜ್ಯ
ಚಲನಚಿತ್ರ ಪ್ರಶಸ್ತಿ ಸಮಾರಂಭ
ಕೀಬೋರ್ಡನಲ್ಲಿ ಗಿನ್ನೀಸ್
ದಾಖಲೆ ಮಾಡಿದ ಪ್ಯಾಟ್ರಿಕ್ಸ್
ತಮಿಳುನಾಡು ಶಾಲೆಗಳಲ್ಲಿ
ದೈಹಿಕ ಶಿಕ್ಷೆ ನಿಷಿದ್ಧ
ದೇಶದ ನಿಧಾನಗತಿಗೆ
ಅಧಿಕಾರಶಾಹಿ ಕಾರಣ: ಮೂರ್ತಿ
|