|
ಭಾರತಿ ನಗರದಲ್ಲಿ ಭುಗಿಲೆದ್ದ ಕೋಮು ಗಲಭೆ
ಬೆಂಗಳೂರು: ಇರಾಕ್‌ನ ಉಚ್ಚಾಟಿತ ಅಧ್ಯಕ್ಷ ಸದ್ದಾಂ
ಹುಸೇನ್‌ಗೆ ಗಲ್ಲು ಶಿಕ್ಷೆ ನೀಡಿದ್ದನ್ನು ವಿರೋಧಿಸಿ ಆಯೋಜಿಸಿದ್ದ
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಘಟನೆ ನಿನ್ನೆ ಸಂಜೆ ಭಾರತಿ ನಗರ
ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಲಭೆಯಲ್ಲಿ ಎಸಿಪಿ ಸೇರಿದಂತೆ ಎಂಟು ಪೊಲೀಸರು ಮತ್ತು ೫೦ಕ್ಕೂ
ಹೆಚ್ಚು ಜನರು ಗಾಯಗೊಂಡಿದ್ದಾರೆ. ೨೫ ದ್ವಿಚಕ್ರ ವಾಹನ, ೧೦ ಕಾರು,
ಒಂದು ಆಟೋ ಬೆಂಕಿಗೆ ಆಹುತಿಯಾಗಿವೆ.
ಹಿನ್ನೆಲೆ: ಇರಾಕ್‌ನ ಅಧ್ಯಕ್ಷ ಸದ್ದಾಂ ಹುಸೇನ್‌ನನ್ನು ಗಲ್ಲಿಗೇರಿಸಿದ ಕ್ರಮವನ್ನು ವಿರೋಧಿಸಿ ಶಿವಾಜಿ ನಗರದ ಪಾಲಿಕೆ ಮೈದಾನದಲ್ಲಿ
ಶುಕ್ರವಾರ ಸಂಜೆ ಬಹಿರಂಗ ಪ್ರತಿಭಟನೆ ಆಯೋಜಿಸಲಾಗಿತ್ತು.
ಸಾವಿರಾರು ಜನರು ಸೇರಿದ್ದರು. ನಗರದ ನಾನಾಕಡೆಗಳಿಂದ
ಮೆರವಣಿಗೆಗಳಲ್ಲಿ ಜನರು ಬರುತ್ತಿದ್ದರು. ಮೆರವಣಿಗೆಯಲ್ಲಿದ್ದ
ಕಿಡಿಗೇಡಿಗಳು ಹಿಂದೂ ಸಮಾಜೋತ್ಸವಕ್ಕಾಗಿ ಕಟ್ಟಿದ್ದ ಬ್ಯಾನರ್‌ನ್ನು
ಹರಿದಿದ್ದು ಗಲಭೆಗೆ ಮೂಲ ಕಾರಣವಾಗಿದೆ.
ಆರ್.ಟಿ ನಗರ, ಸುಲ್ತಾನ್ ಪಾಳ್ಯ, ಫ್ರೇಜರ್ ಟೌನ್, ಕೆ.ಆರ್
ಮಾರ್ಕೆಟ್, ಕಲಾಸಿಪಾಳ್ಯ ಮುಂತಾದ ಕಡೆ ಪ್ರತಿಭಟನಾಕಾರರು
ಟೈರ್‌ಗಳನ್ನು ಸುಟ್ಟು ಜನರಲ್ಲಿ ಕೆಲವು ಸಮಯ
ಭಯವನ್ನುಂಟು ಮಾಡಿದರು.
ಇನ್ನಷ್ಟು
ಎಎಕ್ಸ್‌ಎನ್ ಚಾನೆಲ್ ಮೇಲೆ
ಪ್ರತಿಬಂಧ
ಶಿಲ್ಪಾ ನಿಂದನೆ: ಗಂಭೀರವಾಗಿ
ಪರಿಗಣಿಸಿರುವ ಭಾರತ
ಜ.೨೩ರಂದು ರಾಜ್ಯ
ಚಲನಚಿತ್ರ ಪ್ರಶಸ್ತಿ ಸಮಾರಂಭ
ಕೀಬೋರ್ಡನಲ್ಲಿ ಗಿನ್ನೀಸ್
ದಾಖಲೆ ಮಾಡಿದ ಪ್ಯಾಟ್ರಿಕ್ಸ್
ತಮಿಳುನಾಡು ಶಾಲೆಗಳಲ್ಲಿ
ದೈಹಿಕ ಶಿಕ್ಷೆ ನಿಷಿದ್ಧ
ದೇಶದ ನಿಧಾನಗತಿಗೆ
ಅಧಿಕಾರಶಾಹಿ ಕಾರಣ: ಮೂರ್ತಿ
|