|
ಇನ್ನೂ ಕೊಲ್ಲುವ ಕನಸಿನಲ್ಲೇ ಇರುವ ಕೋಲಿ!
ನೋಯ್ಡಾದ
ನಿತಾರಿ ಸರಣಿ ಹತ್ಯಾಕಾಂಡದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ
ಸುರೇಂದ್ರ ಕೋಲಿ ಇನ್ನೂ ಕೊಲೆಯ ಗುಂಗಿನಲ್ಲೆ ಇದ್ದು
ಮಕ್ಕಳನ್ನು ಕೊಲ್ಲುವ ಮತ್ತು ತಿನ್ನುವ ಹಾವಭಾವ
ಪ್ರದರ್ಶಿಸುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಏನಾದರೂ
ಅನಾಹುತ ಆಗಬಹುದೆಂದು ಆತನಿಗೆ ಬೇಡಿ ತೊಡಿಸಿ ಲಾಕಪ್‌ನಲ್ಲಿ ಇಡಲಾಗಿದೆ
ಎಂದು ಅವರು ಹೇಳಿದ್ದಾರೆ. ಇದಲ್ಲದೇ ಇನ್ನೊಬ್ಬ ಆರೋಪಿ, ಸರಣಿ
ಹತ್ಯೆ ನಡೆದಿರುವ ಮನೆಯ ಮಾಲಿಕ ಮೊನಿಂದರ್ ಸಿಂಗ್
ಪಂಡೇರ್‌ನನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆ.
ಮಾರಕಾಸ್ತ್ರ ವಶ
ಏತನ್ಮಧ್ಯೆ
ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ರಕ್ತದ ಕಲೆ
ಗುರುತುಗಳಿರುವ ಮಚ್ಚೊಂದನ್ನು ಮೋನಿಂದರ್ ಸಿಂಗ್ ಮನೆಯ
ಸಮೀಪದ ಪೊದೆಯಿಂದ ವಶಪಡಿಸಿಕೊಂಡಿದೆ. ಈ ಮಚ್ಚು ಬಳಸಿ
ಸುರೇಂದ್ರ ಕೋಲಿ ಮಕ್ಕಳನ್ನು ಕೊಲ್ಲತ್ತಿದ್ದ ಎಂದು ತನಿಖೆಯ
ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಿಬಿಐ ತಂಡವು
ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕೋಲಿಯನ್ನು ಪಂಡೇರ್ ಮನೆಗೆ
ಕರೆದೊಯ್ದ ವೇಳೆ ಆತ ಮನೆ ಸಮೀಪದ ಪೊದೆಯಿಂದ ಈ
ಮಚ್ಚನ್ನು ಸಿಬಿಐ ಜಂಟಿ ನಿರ್ದೇಶಕ ಅರುಣ್ ಕುಮಾರ್ ಅವರಿಗೆ
ನೀಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ರಕ್ತದ ಕಲೆಗಳಿದ್ದ
ಮಚ್ಚನ್ನು ಸಿಬಿಐ ಫಾರೆನ್ಸಿಕ್ ಪರೀಕ್ಷೆಗೆ ಕಳುಹಿಸಿದೆ.
ಇನ್ನಷ್ಟು
ಎಎಕ್ಸ್‌ಎನ್ ಚಾನೆಲ್ ಮೇಲೆ
ಪ್ರತಿಬಂಧ
ಶಿಲ್ಪಾ ನಿಂದನೆ: ಗಂಭೀರವಾಗಿ
ಪರಿಗಣಿಸಿರುವ ಭಾರತ
ಜ.೨೩ರಂದು ರಾಜ್ಯ
ಚಲನಚಿತ್ರ ಪ್ರಶಸ್ತಿ ಸಮಾರಂಭ
ಕೀಬೋರ್ಡನಲ್ಲಿ ಗಿನ್ನೀಸ್
ದಾಖಲೆ ಮಾಡಿದ ಪ್ಯಾಟ್ರಿಕ್ಸ್
ತಮಿಳುನಾಡು ಶಾಲೆಗಳಲ್ಲಿ
ದೈಹಿಕ ಶಿಕ್ಷೆ ನಿಷಿದ್ಧ
ದೇಶದ ನಿಧಾನಗತಿಗೆ
ಅಧಿಕಾರಶಾಹಿ ಕಾರಣ: ಮೂರ್ತಿ
|