Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 18 January 2007 12:25 PM

ಶಿಲ್ಪಾ ನಿಂದನೆ: ಗಂಭೀರವಾಗಿ ಪರಿಗಣಿಸಿರುವ ಭಾರತ

 

ನವದೆಹಲಿ: ಬ್ರಿಟನ್‌ದ ಚಾನೆಲ್ ೪ರ ರಿಯಾಲಿಟಿ ಶೋ `ಸೆಲಿಬ್ರಿಟಿ ಬಿಗ್ ಬ್ರದರ್‍ಸ್' ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಶಿಲ್ಪಾ ಶೆಟ್ಟಿ ಈಗ ಅಂತರರಾಷ್ಟ್ರೀಯ ವಿವಾದದ ಕೇಂದ್ರಬಿಂದುವಾಗಿದ್ದಾರೆ.


Shilpa Shetty

`ಬಿಗ್ ಬ್ರದರ್‍ಸ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಲವು ಸ್ಪರ್ಧಿಗಳು ಶಿಲ್ಪಾ ಶೆಟ್ಟಿಯವರನ್ನು `ಇಂಡಿಯನ್' ಎಂದು ನಿಂದಿಸಿ, ಆಕೆಯ ಬಣ್ಣ, ಉಚ್ಛಾರಣೆ, ಅಡಿಗೆಗಳ ಬಗ್ಗೆ ಹೀಯಾಳಿಸಿದ್ದಾರೆ. `ಈ ಇಂಡಿಯನ್ ಮಹಿಳೆ ಕೈಯಿಂದ ಆಹಾರ ತಿನ್ನುವ ಅನಾಗರೀಕ ಸಮಾಜಕ್ಕೆ ಸೇರಿದವಳು' ಎಂದು ಅವಮಾನಕರವಾಗಿ ಮಾತನಾಡಿದ್ದಾರೆ.
 

ಈ ಕಾರ್ಯಕ್ರಮ ಬಿತ್ತರವಾಗುತ್ತಿದ್ದಂತೆ ವಿಶ್ವದಾದ್ಯಂತ ವಿರೋಧ ವ್ಯಕ್ತವಾಗಿದೆ. ಈ ಕುರಿತಂತೆ ಲಂಡನ್‌ನಲ್ಲಿರುವ ಭಾರತೀಯ ಹೈ ಕಮೀಷನರ್ ಅಲ್ಲಿಯ ಸರ್ಕಾರದ ಜೊತೆ ಚರ್ಚಿಸಿದ್ದಾರೆ. ಬ್ರಿಟನ್ ಕೂಡಾ ಈ ಘಟನೆಯನ್ನು ಖಂಡಿಸಿದ್ದು ಕ್ರಮ ಕೈಗೊಳ್ಳಲು ಮಾಧ್ಯಮ ನಿಯಂತ್ರಣ ಮಂಡಳಿಗೆ ಆದೇಶಿಸಿದೆ.
 

ಬ್ರಿಟನ್‌ನಲ್ಲಿರುವ `ಏಷ್ಯಾ ಮಹಿಳೆಯರ ಹಕ್ಕು ರಕ್ಷಣಾ ಸಂಸ್ಥೆ' ದೊಡ್ಡ ಚಳುವಳಿಯನ್ನು ಹಮ್ಮಿಕೊಂಡಿದೆ. ಈ ಘಟನೆಯನ್ನು ವಿರೋಧಿಸಿ ಬ್ರಿಟನ್ ಮಾಧ್ಯಮ ನಿಯಂತ್ರಣ ಮಂಡಳಿಗೆ ಹತ್ತು ಸಾವಿರಕ್ಕೂ ಹೆಚ್ಚು ಮೇಯ್ಲ್‌ಗಳು ಬಂದಿವೆ.
 

ಬ್ರಿಟನ್ ಸಂಸತ್ತಿನಲ್ಲೂ ಈ ಘಟನೆಯನ್ನು ಭಾರತೀಯ ಮೂಲದ ಕೀತ್ ವಾಜ್ ಪ್ರಸ್ತಾಪಿಸಿ `ಆಧುನಿಕ ಜಗತ್ತಿನಲ್ಲಿಯೂ ಜನಾಂಗೀಯ ದ್ವೇಷ, ವರ್ಣ ತಾರತಮ್ಯ ಇರುವುದು ನಾಚಿಗೇಡು' ಎಂದಿದ್ದಾರೆ.
 

ಆದರೆ ಕಾರ್ಯಕ್ರಮದ ನಿಯೋಜಕರು ಈ ಆಪಾದನೆಯನ್ನು ನಿರಾಕರಿಸಿದ್ದು ತಮಗೆ ಶಿಲ್ಪಾರಿಂದ ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿದ್ದಾರೆ.

 

ಇನ್ನಷ್ಟು

ಎನ್‌ಕೌಂಟರ್‌ನಲ್ಲಿ ರೌಡಿ ರಫೀಕ್ ಹತ್ಯೆ

ಸಾಧುಗಳಿಂದ `ಶಶಿ ಸ್ನಾನ'ವನ್ನು ಬಹಿಷ್ಕರಿಸುವ ಬೆದರಿಕೆ

ಇಂದು ಹೊರಬರಲಿರುವ ನವಜೋತ್ ಸಿಂಗ್ ಸಿಧು

ಅಫ್ಜಲ್ ಕತ್ತಿಗೆ ಬಿಗಿಯಾದ ನೇಣು

ಬೀದಿನಾಯಿ ನಿರ್ಮೂಲನೆಗೆ ಒತ್ತಾಯಿಸಿ ಪ್ರತಿಭಟನೆ

ಐಟಿಯ ಹೊಸತಾಣವಾಗುತ್ತಿರು ಜೈಪುರ್

ಮೂವತ್ನಾಲ್ಕು ಪೂರೈಸಿದ ದ್ರಾವಿಡ್

ನಾಗಾರ್ಜುನ ಸ್ಥಾವರ ವಾರಗಳ ಕಾಲ ಸ್ಥಗಿತ

ಪಿಎಸ್‌ಎಲ್‌ವಿ-ಸಿ೭ದ ಯಶಸ್ವಿ ಉಡಾವಣೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com