|
ಎಎಕ್ಸ್‌ಎನ್ ಚಾನೆಲ್ ಮೇಲೆ ಪ್ರತಿಬಂಧ
ನವದೆಹಲಿ: `ಜಗತ್ತಿನ ಅತ್ಯಂತ ಅಶ್ಲೀಲ ಜಾಹಿರಾತುಗಳು'
ಎನ್ನುವ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದರಿಂದ ಎಎಕ್ಸ್‌ಎನ್
ಮೇಲೆ ಎರಡು ತಿಂಗಳ ಮಟ್ಟಿಗೆ ನಿಷೇಧವನ್ನು ಹೇರಲಾಗಿದೆ.
ಇದು ಅಸಭ್ಯ, ಉತ್ತಮ ಅಭಿರುಚಿಯ ವಿರುದ್ಧವಾಗಿದ್ದು ಸಾರ್ವಜನಿಕ
ನೈತಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವ
ಆಪಾದನೆಯನ್ನು ಎಎಕ್ಸ್‌ಎನ್ ಮೇಲೆ ಸರ್ಕಾರ ಹೊರಿಸಿದೆ.
ಎಎಕ್ಸ್‌ಎನ್ ಮೇಲಿನ ನಿರ್ಬಂಧ ಮಾರ್ಚ್ ೧೫ರ ತನಕ
ಜಾರಿಯಲ್ಲಿರುವುದು. ಇದು ಕೇಬಲ್, ಡಿಟಿಎಚ್, ಸಿಎಎಸ್ ಪ್ರಸಾರಗಳಿಗೂ
ಅನ್ವಯಿಸುತ್ತದೆ. ೧೯೯೫ರ ಕೇಬಲ್ ಪ್ರಸಾರ ಕಾನೂನು ಪ್ರಕಾರ ಈ
ನಿರ್ಬಂಧವನ್ನು ಹೇರಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು
ಪ್ರಸಾರ ಖಾತೆ ಸಚಿವ ಪ್ರಿಯ ರಂಜನ್ ದಶಮುನ್ಶಿ ತಿಳಿಸಿದ್ದಾರೆ.
ಎಎಕ್ಸ್‌ಎನ್ ಲಾಸ್ ಎಂಜಲೀಸ್ ಮೂಲದ `ಸೋನಿ ಪಿಚ್ಚರ್‍ಸ್
ಎಂಟರ್‌ಟೈನ್‌ಮೆಂಟ್'ದ ಒಡೆತನದಲ್ಲಿರುವ ಚಾನೆಲ್ ಆಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಜನ್ ಸಿಇಒ
ಕುನಾಲ್ ದಾಸ್‌ಗುಪ್ತಾ `ಸರ್ಕಾದ ಆದೇಶ ಹೊರ ಬೀಳುತ್ತಲೇ
ಎಎಕ್ಸ್‌ಎನ್ ಪ್ರಸಾರವನ್ನು ಭಾರತದಲ್ಲಿ ನಿಲ್ಲಿಸಿದ್ದೇವೆ. ಆದರೆ ಈ
ಆದೇಶ ನ್ಯಾಯಯುತವಾಗಿಲ್ಲ ಮತ್ತು ಆಕ್ಷೇಪಣಾರ್ಹವಾಗಿದೆ' ಎಂದು
ಹೇಳಿದ್ದಾರೆ.
ಇನ್ನಷ್ಟು
ಎನ್‌ಕೌಂಟರ್‌ನಲ್ಲಿ ರೌಡಿ
ರಫೀಕ್ ಹತ್ಯೆ
ಸಾಧುಗಳಿಂದ `ಶಶಿ
ಸ್ನಾನ'ವನ್ನು ಬಹಿಷ್ಕರಿಸುವ ಬೆದರಿಕೆ
ಇಂದು ಹೊರಬರಲಿರುವ
ನವಜೋತ್ ಸಿಂಗ್ ಸಿಧು
ಅಫ್ಜಲ್ ಕತ್ತಿಗೆ ಬಿಗಿಯಾದ
ನೇಣು
ಬೀದಿನಾಯಿ ನಿರ್ಮೂಲನೆಗೆ
ಒತ್ತಾಯಿಸಿ ಪ್ರತಿಭಟನೆ
ಐಟಿಯ ಹೊಸತಾಣವಾಗುತ್ತಿರು ಜೈಪುರ್
ಮೂವತ್ನಾಲ್ಕು ಪೂರೈಸಿದ ದ್ರಾವಿಡ್
ನಾಗಾರ್ಜುನ ಸ್ಥಾವರ
ವಾರಗಳ ಕಾಲ ಸ್ಥಗಿತ
ಪಿಎಸ್‌ಎಲ್‌ವಿ-ಸಿ೭ದ ಯಶಸ್ವಿ
ಉಡಾವಣೆ
|