Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 17 January 2007 12:59 PM

ವಿಶ್ವಬ್ಯಾಂಕ್ ಕಪಿಮುಷ್ಟಿಯಲ್ಲಿ ಸ್ಥಳೀಯ ಸಂಸ್ಥೆಗಳು

 

ಬೆಂಗಳೂರು: ವಿಶ್ವಬ್ಯಾಂಕ್‌ನ ಸಾಲದ ಶೂಲಕ್ಕೆ ಸಿಲುಕಿರುವ ಸ್ಥಳೀಯ ಸಂಸ್ಥೆಗಳು ಅನಿವಾರ್ಯವಾಗಿಯಾದರೂ `ಕಾರ್ಪೊರೆಟ್ ಸಂಸ್ಕಾರ'ವನ್ನು ಅಳವಡಿಸಿಕೊಳ್ಳುತ್ತಿವೆ.
 

ವಿಶ್ವಬ್ಯಾಂಕ್‌ನ ಪರಿಣತರ ತಂಡದ ಅಭಿಪ್ರಾಯದ ಮೇರೆಗೆ ಆಡಳಿತನಡೆಸುವ ಪರಿಸ್ಥಿತಿ ಸ್ಥಳಿಯ ಸಂಸ್ಥೆಗಳದ್ದಾಗಿದೆ.
 

ಕರ್ನಾಟಕ ಮುನ್ಸಿಪಲ್ ಸುಧಾರಣಾ ಯೋಜನೆ (ಕೆಎಂಆರ್‌ಪಿ) ಅಡಿಯಲ್ಲಿ ೨೪೭.೮ ದಶಲಕ್ಷ ಡಾಲರ್ ಸಾಲ ಒದಗಿಸುವ ಒಪ್ಪಂದವನ್ನು ೨೦೦೬ರಲ್ಲಿ ವಿಶ್ವಬ್ಯಾಂಕ್ ಕರ್ನಾಟಕದೊಂದಿಗೆ ಮಾಡಿಕೊಂಡಿತ್ತು. ಸಾಲ ಒದಗಿಸಲು ವಿಶ್ವಬ್ಯಾಂಕ್ ವಿಧಿಸಿದ ಶರತ್ತುಗಳು ಈಗ ಬಹಿರಂಗ ಗೊಂಡಿದೆ. ಇದರ ಪ್ರಕಾರ ಸ್ಥಳೀಯ ಸಂಸ್ಥೆಗಳು `ಸೌಲಭ್ಯ ಪೂರೈಕೆ ಸಂಸ್ಥೆ-ಗ್ರಾಹಕ' ಎಂದು ಬದಲಾಗಲಿವೆ.
 

೨೦೦೭ರ ಎಪ್ರಿಲ್ ೩೦ರಿಂದ ವಿಶ್ವಬ್ಯಾಂಕ್‌ನ `ಸಾಂಸ್ಥೀಕರಣ ಅಭಿವೃದ್ಧಿ ಮಾರ್ಗಸೂಚಿ'ಯನ್ನು ಸ್ಥಳೀಯ ಸಂಸ್ಥೆಗಳು ಅಳವಡಿಸಿಕೊಳ್ಳಬೇಕಾಗಿದೆ. ಸೇವೆಗೆ ತಕ್ಕ ಮೌಲ್ಯ ಗ್ರಾಹಕರಿಂದ ಸಂಗ್ರಹ, ಹೊಸ ಲೆಕ್ಕಪತ್ರ ಪದ್ಧತಿ ಇನ್ನು ಮುಂತಾದವುಗಳನ್ನು ಇದು ಒಳಗೊಂಡಿದೆ.
 

ರಾಜ್ಯದ ಸುಮಾರು ೧೬೦ ಸಂಸ್ಥೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ಹಾಸನ, ಚಿತ್ರದುರ್ಗ, ಶಿವಮೊಗ್ಗ, ಕೋಲಾರ, ಮಡಿಕೇರಿ, ಸಕಲೇಶಪುರ, ಶೃಂಗೇರಿ ಮುಂತಾದ ಸ್ಥಳೀಯ ಸಂಸ್ಥೆಗಳು ಈಗಾಗಲೇ ಈ ಯೋಜನೆಗೆ ಒಳಪಟ್ಟಿವೆ.

 

ಇನ್ನಷ್ಟು

ಎನ್‌ಕೌಂಟರ್‌ನಲ್ಲಿ ರೌಡಿ ರಫೀಕ್ ಹತ್ಯೆ

ಸಾಧುಗಳಿಂದ `ಶಶಿ ಸ್ನಾನ'ವನ್ನು ಬಹಿಷ್ಕರಿಸುವ ಬೆದರಿಕೆ

ಇಂದು ಹೊರಬರಲಿರುವ ನವಜೋತ್ ಸಿಂಗ್ ಸಿಧು

ಅಫ್ಜಲ್ ಕತ್ತಿಗೆ ಬಿಗಿಯಾದ ನೇಣು

ಬೀದಿನಾಯಿ ನಿರ್ಮೂಲನೆಗೆ ಒತ್ತಾಯಿಸಿ ಪ್ರತಿಭಟನೆ

ಐಟಿಯ ಹೊಸತಾಣವಾಗುತ್ತಿರು ಜೈಪುರ್

ಮೂವತ್ನಾಲ್ಕು ಪೂರೈಸಿದ ದ್ರಾವಿಡ್

ನಾಗಾರ್ಜುನ ಸ್ಥಾವರ ವಾರಗಳ ಕಾಲ ಸ್ಥಗಿತ

ಪಿಎಸ್‌ಎಲ್‌ವಿ-ಸಿ೭ದ ಯಶಸ್ವಿ ಉಡಾವಣೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com