Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Sunday, 14 January 2007 12:22 PM

ಎನ್‌ಕೌಂಟರ್‌ನಲ್ಲಿ ರೌಡಿ ರಫೀಕ್ ಹತ್ಯೆ

* ವರದಿ: ಹರ್ಷ
 

ಮಂಗಳೂರು: ಅಂತೂ ರಫೀಕ್ ಎಣಿಸಿಕೊಂಡಂತೆಯೇ ನಡೆಯಿತು. ಆತನ ಭಯ ಕೊನೆಗೂ ನಿಜವಾಯಿತು. ಎನ್‌ಕೌಂಟರ್ ಮೂಲಕವೇ ರಫೀಕ್ ಪಾತಕಲೋಕಕ್ಕೆ ಅಂಕದ ತೆರೆಬಿದ್ದಿದೆ.
 

ರವಿವಾರ ಮುಂಜಾನೆ ಉಡುಪಿ ಇಂದ್ರಾಣಿಯಲ್ಲಿ ಪೊಲೀಸರ ಗುಂಡಿನ ಚಕಮಕಿಯಲ್ಲಿ ಮುಲ್ಕಿ ರಫೀಕ್ ಹೆಣವಾಗಿದ್ದಾನೆ.
Rafeeque

ಇದು ಆತನೂ, ಜನತೆಯೂ ಹೀಗೇ ಆಗುತ್ತದೆ ಎಂದು ಈ ಮೊದಲೇ ತಿಳಿದಿದ್ದರು. ಒಂದಷ್ಟು ತಡವಾಗಿ ಘಟನೆ ಘಟಿಸಿತು. ಅದು ರವಿವಾರ, ಶುಭ ಸಂಕ್ರಮಣದ ದಿನದಂದು ಪಾತಕಿಯೋರ್ವನ ಪಾಪದ ಕೊಡ ತುಂಬಿತ್ತು. ಆತ ಹಾಗೆಯೇ ಕೊಲೆಯಾಗಿ ಹೋಗಿದ್ದ.
 

ಮುಲ್ಕಿ ರಫೀಕ್... ಈತ ನೊಟೋರಿಯಸ್ ಕಿಲ್ಲರ್... ಪಾತಕ ಲೋಕದ ಮಹಾ ಪಾಪಿಯಾಗಿದ್ದ. ಪೋಲಿಸರಿಗೆ ಹಲವು ಬಾರಿ ಚಳ್ಳೆಹಣ್ಣು ತಿನ್ನಿಸುವಲ್ಲಿ ಈತ ಯಶಸ್ವಿಯಾಗಿದ್ದ. ಯಸ್! ಅದರಂತೆ ಶನಿವಾರವೂ ಪೊಲೀಸರಿಗೆ ಆತ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿಯೇ ಬಿಟ್ಟಿದ್ದ...
 

ಪೊಳಲಿ ಅನಂತು ಮತ್ತು ಸುಖಾನಂದ ಶೆಟ್ಟಿ ಹತ್ಯೆಗಳ ಪ್ರಮುಖ ಆರೋಪಿ ಮುಲ್ಕಿ ರಫೀಕ್ ಶುಕ್ರವಾರ ರಾತ್ರಿ ಕೊಡಗು ಗಡಿ ಪ್ರದೇಶದ ದೇವರ ಕೊಲ್ಲಿಯಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾದ.
 

ಪೊಳಲಿ ಅನಂತು ಕೊಲೆ ಪ್ರಕರಣದ ಪ್ರಮುಖ ಆರೊಪಿಯಾಗಿದ್ದುದರಿಂದ ಪಣಂಬೂರು ಇನ್ಸ್‌ಪೆಕ್ಟರ್ ಗಂಗೀರೆಡ್ಡಿ ಮುಲ್ಕಿ ರಫೀಕ್‌ನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಕಸ್ಟಡಿ ಅವಧಿ ಮುಗಿದ ಕಾರಣ ಆತನನ್ನು ಮೈಸೂರು ಜೈಲಿಗೆ ಕರೆದೊಯ್ಯಲಾಗುತ್ತಿತ್ತು. ಹಾದಿ ಮಧ್ಯೆ ಆತ ತಪ್ಪಿಸಿಕೊಂಡಿದ್ದಾನೆ. ಆತನನ್ನು ಕರೆದೊಯ್ದಿದ್ದು ಅತ್ಯಂತ ಹಳೆಯ ಜೀಪೊಂದರಲ್ಲಿ. ಅದೂ ಓರ್ವ ಅತಿ ಕುಖ್ಯಾತ ರೌಡಿಯನ್ನು ಕರೆದೊಯ್ಯುವ ರೀತಿಯೇ ಎಂದು ಆಗಲೇ ಜನರಾಡಿಕೊಂಡಿದ್ದರು. ಇದರ ಹಿಂದೆ ಪೊಲೀಸರ ಕೈವಾಡವೂ ಇತ್ತೆಂಬ ವದಂತಿಯೂ ನಡೆಯಿತು. ಆದರೆ ರವಿವಾರ ಮುಂಜಾನೆ ಎನ್‌ಕೌಂಟರ್ ನಡೆದಿದೆ ಎಂದಾಗ ಇದೆಲ್ಲವೂ ಒಂದು ಪ್ರೀಪ್ಲೇನ್ಡ್ ಘಟನೆ ಎಂಬುದಂತೂ ನಿಜವಾಗಿದೆ. ರೌಡಿ, ಕಿಲ್ಲರ್ ಮುಲ್ಕಿ ರಫೀಕ್ ಕೊನೆಗೂ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.
 

ಗೊಂದಲ: ಮುಲ್ಕಿ ರಫೀಕ್ ಪರಾರಿ ವಿಚಾರದಲ್ಲಿ ಭಾರೀ ಗೊಂದಲ ಉಂಟಾಗಿತ್ತು. ಆತನನ್ನು ಮೈಸೂರಿಗೆ ಕೊಂಡೊಯ್ಯವ ವೇಳೆಗೆ ಕೇವಲ ಐದು ಮಂದಿ ಕಾನ್ಸ್ಟೇಬಲ್ ಮತ್ತು ಒಬ್ಬ ಎಸ್.ಐ ಮಾತ್ರ ಆತನ ಜೊತೆಯಲ್ಲಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳೇ ತಿಳಿಸಿದ್ದಾರೆ.
 

ಯಾವುದೇ ಪರಿಚಯವಿಲ್ಲದ ಅದೂ ನಡುರಾತ್ರಿಯಲ್ಲಿ ಪೊಲೀಸ್ ಎಎಸ್‌ಐ ಯೊಬ್ಬನನ್ನು ದೂಡಿಹಾಕಿ ರಫೀಕ್ ಮಾಯವಾದನೇ ಎಂಬ ಸಂಶಯ ಜನರಲ್ಲಿ ಮೂಡಿದೆ.
 

ಈ ಮಧ್ಯೆ ಪೊಲೀಸ್ ವಾಹನವನ್ನು ಒಂದು ವಾಹನ ಹಿಂಬಾಲಿಸುತ್ತಿತ್ತು ಎನ್ನಲಾಗಿದ್ದು ಪೊಲೀಸ್ ವಾಹನದಿಂದ ಜಿಗಿದ ಆತ ಅದರಲ್ಲಿ ಪರಾರಿಯಾದನೇ ಎಂಬ ಸಂದೇಹ ಮೂಡತೊಡಗಿದೆ. ಈ ಬಗ್ಗೆ ವದಂತಿಗಳೂ ಹಬ್ಬಿವೆ.
 

ಎನ್‌ಕೌಂಟರ್ ವದಂತಿ ಹಬ್ಬಿತ್ತು: ಮುಲ್ಕಿ ರಫೀಕ್ ಎನ್‌ಕೌಂಟರ್ ನಲ್ಲಿ ಬಲಿಯಾಗಿದ್ದಾನೆ ಎಂಬ ವದಂತಿ ಶನಿವಾರ ಭಾರೀ ಕುತೂಹಲಕ್ಕೆ ಎಡೆಮಾಡಿದೆ. ದೂರವಾಣಿ ಕರೆಗಳು ಪೊಲೀಸ್ ಇಲಾಖೆ, ಪತ್ರಿಕಾ ಕಚೇರಿಗಳಿಗೆ ಬರುತ್ತಿದ್ದವು. ರಫೀಕ್ ಪೊಲೀಸ್ ಎನ್ ಕೌಂಟರ್‌ಗೆ ಬಲಿಯಾಗಿದ್ದಾನೆಂಬ ವದಂತಿ ದಿನಪೂರ್ತಿ ಸಾಗಿತ್ತು. ಪೊಲೀಸರ ನಿರ್ಲಕ್ಷ್ಯವೇ ರಫೀಕ್ ಪರಾರಿಗೆ ಕಾರಣ. ಅವರೇ ಆತನ ಪರಾರಿಗೆ ಅವಕಾಶ ಮಾಡಿಕೊಟ್ಟರು ಎಂದು ಜನರಾಡಿಕೊಳ್ಳುತ್ತಿದ್ದಾರೆ.

 

ಇನ್ನಷ್ಟು

ಬೀದಿನಾಯಿ ನಿರ್ಮೂಲನೆಗೆ ಒತ್ತಾಯಿಸಿ ಪ್ರತಿಭಟನೆ

ಐಟಿಯ ಹೊಸತಾಣವಾಗುತ್ತಿರು ಜೈಪುರ್

ಮೂವತ್ನಾಲ್ಕು ಪೂರೈಸಿದ ದ್ರಾವಿಡ್

ನಾಗಾರ್ಜುನ ಸ್ಥಾವರ ವಾರಗಳ ಕಾಲ ಸ್ಥಗಿತ

ಪಿಎಸ್‌ಎಲ್‌ವಿ-ಸಿ೭ದ ಯಶಸ್ವಿ ಉಡಾವಣೆ

ಬೆಂಗಳೂರು ಡ್ರೀಮ್ಸ್: ಎಸ್ಸೆಮ್ಮೆಸ್‌ನಿಂದಲೂ ಮಾಹಿತಿ

ಮಂಗಳೂರಿನಲ್ಲಿ ಉಗ್ರ ಮುಖಂಡನ ಸೆರೆ?

ಲಂಚಕೋರ ಸಂಸದರ ವಜಾ ಸರಿ: ಸುಪ್ರೀಂ ಕೋರ್ಟ್

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com