|
ಅಫ್ಜಲ್ ಕತ್ತಿಗೆ ಬಿಗಿಯಾದ ನೇಣು
ನವದೆಹಲಿ: ಸಂಸತ್ತಿನ ಮೇಲೆ ದಾಳಿ ಮಾಡಿದ ಆರೋಪಿ
ಮಹಮ್ಮದ್ ಅಫ್ಜಲ್ ತನಗೆ ವಿಧಿಸಿರುವ ಮರಣದಂಡನೆಯನ್ನು
ಮರುಪರಿಶೀಲಿಸುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ
ಅರ್ಜಿಯನ್ನು ಶುಕ್ರವಾರ ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.
ಇದೇ ಸಂದರ್ಭದಲ್ಲಿ ೧೦ ವರ್ಷದ ಶಿಕ್ಷೆಗೆ ಗುರಿಯಾಗಿರುವ ಶೌಕತ್
ಹುಸೇನ್ ಗುರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿನ್ನು ಕೂಡಾ
ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.
ವೈ.ಕೆ. ಸಭರವಾಲ್, ಕೆ.ಜಿ. ಬಾಲಕೃಷ್ಣನ್, ಬಿ.ಎನ್. ಅಗರವಾಲ್
ಮತ್ತು ಪಿ.ಪಿ. ನೌಳೇಕರ್ ಪೀಠ ಈ ತೀರ್ಪಿತ್ತಿದೆ.
೨೦೦೧ ಡಿಸೆಂಬರ್ ೧೩ರಂದು ಸಂಸತ್ ಮೇಲೆ ದಾಳಿ ನಡೆಸಿದ
ಅಪರಾಧಕ್ಕಾಗಿ ೨೦೦೫ ಅಗಸ್ಟ್ ೪ರಂದು ಸರ್ವೋಚ್ಚ ನ್ಯಾಯಾಲಯ
ಅಫ್ಜಲ್‌ಗೆ ಮರಣದಂಡನೆಯನ್ನು ವಿಧಿಸಿತ್ತು.
ತನ್ನ ಬಗ್ಗೆ ನ್ಯಾಯಾಲಯ ಸರಿಯಾಗಿ ವಿಚಾರಣೆ ನಡೆಸಿಲ್ಲ. ತನಗೆ
ತನ್ನ ಆಯ್ಕೆಯ ವಕೀಲರನ್ನೂ ನೇಮಿಸಿಕೊಳ್ಳಲು ಅವಕಾಶ ನೀಡಿಲ್ಲ.
ಎಂದು ಅರ್ಜಿಯಲ್ಲಿ ಅಫ್ಜಲ್ ಆರೋಪಿಸಿದ್ದ.
ಇನ್ನಷ್ಟು
ಬೀದಿನಾಯಿ ನಿರ್ಮೂಲನೆಗೆ
ಒತ್ತಾಯಿಸಿ ಪ್ರತಿಭಟನೆ
ಐಟಿಯ ಹೊಸತಾಣವಾಗುತ್ತಿರು ಜೈಪುರ್
ಮೂವತ್ನಾಲ್ಕು ಪೂರೈಸಿದ ದ್ರಾವಿಡ್
ನಾಗಾರ್ಜುನ ಸ್ಥಾವರ
ವಾರಗಳ ಕಾಲ ಸ್ಥಗಿತ
ಪಿಎಸ್‌ಎಲ್‌ವಿ-ಸಿ೭ದ ಯಶಸ್ವಿ
ಉಡಾವಣೆ
ಬೆಂಗಳೂರು ಡ್ರೀಮ್ಸ್:
ಎಸ್ಸೆಮ್ಮೆಸ್‌ನಿಂದಲೂ ಮಾಹಿತಿ
ಮಂಗಳೂರಿನಲ್ಲಿ ಉಗ್ರ
ಮುಖಂಡನ ಸೆರೆ?
ಲಂಚಕೋರ ಸಂಸದರ
ವಜಾ ಸರಿ: ಸುಪ್ರೀಂ ಕೋರ್ಟ್
|